

Recipe: ಇಂದಿನ ದಿನಗಳಲ್ಲಿ ಆಹಾರ ಪ್ರಿಯರು ನಾನಾ ರೀತಿಯ ಆಹಾರವನ್ನು ಸೇವಿಸಲು ಬಯಸುತ್ತಾರೆ. ಅದೇ ರೀತಿಯಲ್ಲಿ ಮೊಟ್ಟೆಯನ್ನು ಇಷ್ಟ ಪಡುವಂತವರು ಅದರಿಂದ ಮಾಡುವಂತಹ ಎಲ್ಲಾ ಪದಾರ್ಥಗಳನ್ನು ಸೇವಿಸಲು ಬಯಸುತ್ತಾರೆ. ಅದೇ ರೀತಿ ನಾವಿಂದು ಮೊಟ್ಟೆಯಿಂದ ಮಾಡುವಂತಹ ಎಗ್ ಐಸ್ಕ್ರೀಂ ಫ್ಲೋಟಿಂಗ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.
* 2 ಮೊಟ್ಟೆ
* 1/2 ಕಪ್ ಸಕ್ಕರೆ ಪುಡಿ
* 1/4 ಚಮಚ ವೆನಿಲ್ಲಾ ಎಸೆನ್ಸ್
* 2 ಕಪ್ ಹಾಲು
* 1/4 ಕಪ್ ಕಾನ್ಫ್ಲೋರ್
* 10 ತುಂಡು ಬೇಯಿಸಿದ ಮೊಟ್ಟೆಯ ಬಿಳಿಭಾಗ
ಒಂದು ಬಟ್ಟಲಿಗೆ ಮೊಟ್ಟೆಯನ್ನು ಒಡೆದು ಹಳದಿ ಭಾಗವನ್ನು ಪ್ರತ್ಯೇಕವಾಗಿಟ್ಟು, ಬರೀ ಬಿಳಿಯ ಬಿಳಿಭಾಗವನ್ನು ಹಾಕಿ ಅದಕ್ಕೆ ಸಕ್ಕರೆ ಪುಡಿ, ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮತ್ತೊಂದು ಬೌಲ್ಗೆ ಮೊಟ್ಟೆಯ ಹಳದಿ ಭಾಗ ಹಾಕಿ ಅದಕ್ಕೆ ವೆನಿಲ್ಲಾ ಎಸೆನ್ಸ್, ಸಕ್ಕರೆ, ಕಾನ್ಫ್ಲೋರ್, ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಲೆಯ ಮೇಲೆ ಬೇಯಲು ಬಿಡಿ. ಇದಕ್ಕೆ ರೆಡಿ ಮಾಡಿಟ್ಟುಕೊಮಡಿರುವ ಮೊಟ್ಟೆಯ ಬಿಳಿಭಾಗವನ್ನು ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಸಮಯ ಬಿಸಿ ಮಾಡಿ. ಈ ಮಿಶ್ರಣವನ್ನು ಒಮದು ಕಡಾಯಿಗೆ ಹಾಕಿ ಅದರ ಮೆಲೆ ಬಾದಾಮಿ ಹಾಕಿ 4 ಗಂಟೆ ಫ್ರಿಜ್ನಲ್ಲಿಡಿ. ನಂತರ ಸೇವಿಸಿ...(ಏಜೆನ್ಸೀಸ್)