ಪ್ರಾರಂಭದಲ್ಲೇ ಹೆಚ್ಚು ತೂಕ ಇಳಿಸಿಕೊಳ್ಳುವುದು ಅಪಾಯಕಾರಿ: ಪೌಷ್ಟಿಕತಜ್ಞೆ ರುಜುತಾ ದಿವೇಕರ್| Divekar

untitled-design-2025-09-09t155031332-68bfff787ea96
Published on

Divekar : ಫಿಟ್ನೆಸ್​ ಪ್ರಾಯೋಗಿಕ ಮತ್ತು ಸುಸ್ಥಿರ ವಿಧಾನಕ್ಕೆ ಹೆಸರುವಾಸಿಯಾದ ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್, ತೂಕ ಇಳಿಸುವ ಪ್ರಯಾಣವನ್ನು ಆತುರದಿಂದ ಮಾಡಬಾರದು. ತೀವ್ರ ವಿಧಾನಗಳನ್ನು ಅನುಸರಿಸುವ ಬದಲು ಮನೆಯಲ್ಲಿ ಬೇಯಿಸಿದ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ವಿಶ್ರಾಂತಿಯನ್ನು ಪಡೆಯುವುದರಿಂದ ಜೀವನಶೈಲಿಯನ್ನು ಪ್ರತಿಪಾದಿಸಬಹುದು ಎಂದು ಹೇಳಿದ್ದಾರೆ.

ನೀವು ತೂಕ ಇಳಿಸಿಕೊಳ್ಳಲು ಏಕೆ ಬಯಸುತ್ತೀರಿ?

ದಿವೇಕರ್​ ಅವರ ಪ್ರಕಾರ, ಯಾವುದೇ ವ್ಯಕಗ್ತಿ ತೂಕ ಇಳಿಸಿಕೊಳ್ಳುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೊದಲು ಯಾಕೆ ತೂಕ ಇಳಿಸಿಕೊಳ್ಳಬೇಕು ಎಂದು ಕೇಳಿಕೊಳ್ಳಬೇಕು. ಹಾಗೆಯೇ, ಹೆಚ್ಚಿನ ಜನರು ತಾವು ಎದುರಿಸುವಂತಹ ಕಳಪೆ ನಿದ್ರೆ, ಮಧುಮೇಹ, ರಕ್ತದೊತ್ತಡ ಸಮಸ್ಯೆಗಳು, ಶಕ್ತಿಯ ಕೊರತೆ ಅಥವಾ ಸಾಮಾನ್ಯ ಬೊಜ್ಜು ಮುಂತಾದ ತೊಂದರೆಯ ಲಕ್ಷಣಗಳನ್ನು ಅನುಭವಿಸುವಾಗ ತೂಕ ಇಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಾರೆ. ಈ ಮಾರ್ಗವು ಅನಾರೋಗ್ಯವನ್ನು ಸೂಚಿಸುವ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

ತೀವ್ರವಾದ ಆಹಾರ ಕ್ರಮಗಳನ್ನು ಅನುಸರಿಸುವವರಿಗ ಎಚ್ಚರ ನೀಡಿದ ದಿವೇಕರ್​ ತೂಕ ಇಳಿಸಿಕೊಳ್ಳುವ ಗುರಿಯನ್ನು ಹೊಂದಿರುವವರು ಶಾರ್ಟ್​ಕಟ್​ ಆಗಿ ಮಾಡುವ ವಿಧಾನಗಳು ಜನರ ಆರೋಗ್ಯವನ್ನು ಹದಗೆಡಿಸುತ್ತದೆ ಎಂದು ತಿಳಿಸಿದ್ದಾರೆ.

ದಿವೇಕರ್​ ಆರೋಗ್ಯ ಕಾಪಾಡಲು 3 ಸೂತ್ರಗಳನ್ನು ತಿಳಿಸಿದ್ದಾರೆ

1. ಮನೆಯಲ್ಲಿ ಬೇಯಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು

2. ನಿಯಮಿತವಾಗಿ ವ್ಯಾಯಾಮ ಮಾಡಿ

3. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿ

ತೂಕ ಇಳಿಸುವುದು ಹಂತ ಹಂತವಾಗಿ ನಡೆಯುವ ಪ್ರಕ್ರಿಯೆಯಾಗಿರುತ್ತದೆ ಸುಮಾರು 9 ತಿಂಗಳು ಈ ಕ್ರಮವನ್ನು ಕೈಗೊಳ್ಳಬೇಕೆಂದು ತಿಳಿಸಿಕೊಡುತ್ತಾರೆ.

* ಮೊದಲು ಮೂರು ತಿಂಗಳು ಆರೋಗ್ಯ ಸುಧಾರಣೆ ಮಾಡಿಕೊಳ್ಳಬೇಕು. ಅಂದರೆ, ಉತ್ತಮ ನಿದ್ರೆ, ಸಕ್ಕರೆ ಮತ್ತು ಒತ್ತಡಗಳಿಂದ ಹೊರಬರುವುದು ಇವು ಆರಂಭಿಕ ಲಕ್ಷಣಗಳಾಗಿವೆ ಎಂದು ತಿಳಿಸಿದ್ದಾರೆ.

* ಮುಂದಿನ ಮೂರು ತಿಂಗಳಲ್ಲಿ ದೇಹವು ಗೋಚರ ಬದಲಾವಣೆಗಳನ್ನು ಪ್ರತಿಬಿಂಬಿಸಲು ಪ್ರಾರಂಭವಾಗುತ್ತದೆ. ಇಲ್ಲಿ ನಾವು ಧರಿಸುವ ಬಟ್ಟೆಗಳು ಉತ್ತಮವಾಗಿ ಹೊಂದಿಕೊಳ್ಳಲು ಪ್ರಾರಂಭವಾಗುತ್ತದೆ. ತೂಕದ ಇಳಿಕೆಯು ತೀವ್ರವಾಗಿ ಚಲಿಸದಿದ್ದರೂ, ಇಂಚುಗಳಲ್ಲಿ ಕಳೆದುಹೋಗುತ್ತದೆ.

* ಕೊನೆಯ ಮೂರು ತಿಂಗಳುಗಳಲ್ಲಿ ಕನಿಷ್ಟ ತೂಕ ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಈ ಎಲ್ಲಾ ಮೂಲಭೂತ ಸುದಾರಣೆಗಳ ನಂತರ ದೇಹವು ಸುರಕ್ಷಿತವಾಗಿ ತೂಕ ಕಳೆದುಕೊಳ್ಳಲು ಪ್ರಾರಂಭಿಸುತ್ತದೆ ಎಂದು ಅವರು ಹೇಳಿದ್ದಾರೆ.

ಆರಂಭಿಕ ತಿಂಗಳುಗಳಲ್ಲಿ ಗರಿಷ್ಠ ತೂಕ ಇಳಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುವಂತವರಿಗೆ ದಿವೇಕರ್ ಬಲವಾಗಿ ಎಚ್ಚರಿಕೆ ನೀಡಿದ್ದಾರೆ. ಈ ರೀತಿಯ ವಿಪರೀತ ಪ್ರಯತ್ನಗಳು ನಿದ್ರೆಗೆ ಅಡ್ಡಿ, ಕೂದಲು ಉದುರುವಿಕೆ, ಮಂದ ಚರ್ಮ, ಮನಸ್ಥಿತಿ ಬದಲಾವಣೆಗಳು ಮತ್ತು ಜೀವನದ ಬಗ್ಗೆ ಉತ್ಸಾಹದ ಕೊರತೆಗೆ ಕಾರಣವಾಗುತ್ತವೆ ಎಂದಿದ್ದಾರೆ. ಈ ಎಲ್ಲಾ ಅಡ್ಡಪರಿಣಾಮಗಳು ಒಟ್ಟಾರೆ ಯೋಗಕ್ಷೇಮವನ್ನು ಹಾಳುಮಾಡುತ್ತದೆ. ಇನ್ನು ಉತ್ತಮ ಆರೋಗ್ಯವು ಒಂದೇ ರೀತಿಯ ದೇಹ ಪ್ರಕಾರಕ್ಕೆ ಸೀಮಿತವಾಗಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net