

ಮುದ್ದೇಬಿಹಾಳ: ವಿದ್ಯೆ ಯಾರೂ ಕದಿಯದ ಆಸ್ತಿ. ಪಾಲಕರು ತಮ್ಮ ಮಕ್ಕಳಿಗೆ ಭೌತಿಕ ಆಸ್ತಿ ಮಾಡುವ ಬದಲು ವಿದ್ಯೆ ಎನ್ನುವ ಆಸ್ತಿಯನ್ನು ಬಳುವಳಿ ನೀಡಬೇಕು ಎಂದು ಬಿಇಒ ಬಿ.ಎಸ್.ಸಾವಳಗಿ ಹೇಳಿದರು.
ಇಲ್ಲಿನ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ 39ನೇ ವಾರ್ಷಿಕ ಸ್ನೇಹ ಸಮ್ಮೇಳನ, ಸಾಂಸತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಮುದ್ದೇಬಿಹಾಳ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯ, ಸಾಹಿತಿ ಅಶೋಕ ಮಣಿ ಮಾತನಾಡಿ, ಜ್ಞಾನ ಭಾರತಿ ಶಾಲೆ ಹೆಸರಿಗೆ ತಕ್ಕಂತೆ ಜ್ಞಾನಾರ್ಜನೆ, ಉತ್ತಮ ಸಂಸ್ಕಾರ ನೀಡುತ್ತಿದೆ. ಭಾರತೀಯ ಪರಂಪರೆ ಪರಿಚಯದ ಜೊತೆಗೆ ಶೈಣಿಕ ಪ್ರಗತಿಗೂ ಶ್ರಮಿಸುತ್ತಿದೆ ಎಂದರು.
ಚಿಕ್ಕ ಮಕ್ಕಳ ತ ಡಾ.ಪರಶುರಾಮ ವಡ್ಡರ ಮಾತನಾಡಿ, ಮಕ್ಕಳಿಗೆ ಜಂಕ್ ಪುಡ್ ಬದಲು ಪೌಷ್ಟಿಕಾಂಶಯುಕ್ತ ಆಹಾರದ ರುಚಿ ಹಚ್ಚಬೇಕು ಎಂದರು. ಅಧ್ಯತೆ ವಹಿಸಿದ್ದ ಸಂಸ್ಥೆ ಅಧ್ಯ ಬಿ.ಪಿ.ಕುಲಕರ್ಣಿ ಮಾತನಾಡಿದರು. ಖಜಾಂಚಿ ಮಾಣಿಕಚಂದ ದಂಡಾವತಿ, ನಿರ್ದೇಶಕರಾದ ಡಾ.ಸಂತೋಷ ಬಾದವಾಡಗಿ, ಡಾ.ಎಸ್.ಬಿ.ವಡವಡಗಿ, ಲೀಲಾ ಭಟ್, ಶಾಂತಾ ಭಟ್, ಜಿ.ಎಲ್.ನಾವಡ, ಎಸ್.ಎಲ್.ಗುರವ, ಪ್ರಾಚಾರ್ಯ ಅರುಣ ಹುನಗುಂದ, ಆಡಳಿತಾಧಿಕಾರಿ ಗೌತಮಬುದ್ಧ ಪಾದಗಟ್ಟಿ ಉಒಸ್ಥಿತರಿದ್ದರು.
ವಿಜ್ಞಾನ ವಸ್ತು ಪ್ರದರ್ಶನ, ಹಳ್ಳಿಯ ಸೊಗಡಿನ ಜಾನಪದ ಪ್ರದರ್ಶನ ಏರ್ಪಡಿಸಲಾಗಿತ್ತು. ಶಾರೀರಿಕ ಪ್ರದರ್ಶನ ಸೇರಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪಿಯುಸಿ ದ್ವೀತಿಯ ವರ್ಷದ ಪರೀೆಯಲ್ಲಿ ಹೆಚ್ಚು ಅಂಕ ಗಳಿಸಿದ ರೇಣುಕಾ ಒಳಕಲದಿನ್ನಿ, ಬೇಬಿಆಯಿಷಾ ಅತ್ತಾರ, ಅರ್ಪಿತಾ ಮುಚಕಂಡಿ, ಐಶ್ವರ್ಯ ಪೂಜಾರಿ ಅವರಿಗೆ ಗೋಪಾಲ ನಾವಡ ದತ್ತಿ ನಿದಿಯ, ಎಸ್ಎಸ್ಎಲ್ಸಿ ಪರೀೆಯಲ್ಲಿ ಹೆಚ್ಚು ಅಂಕ ಗಳಿಸಿದ ನಾಜಮಿನ್ ನಾಯ್ಕೋಡಿ, ಸರಸ್ವತಿ ಬಿರಾದಾರ, ಭಾಗ್ಯಶ್ರೀ ಬಿರಾದಾರ, ಸಂಜನಾ ಪಾಟೀಲ ಅವರಿಗೆ ವಿಠ್ಠಲ ಪದಕಿ ದತ್ತಿ ನಿಧಿಯ ನಗದು ಪುರಸ್ಕಾರ, ರಂಗೋಲಿ ಸ್ಪರ್ಧೆ ವಿಜೇತ ಮಾತೆಯರಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.
ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು.ಮುಖ್ಯಾಧ್ಯಾಪಕ ರಾಮಚಂದ್ರ ಹೆಗಡೆ, ರಂಜಿತಾ ಹೆಗಡೆ ಸ್ವಾಗತಿಸಿದರು. ಸಂಸ್ಥೆ ಕಾರ್ಯದರ್ಶಿ ಪ್ರಭು ಕಡಿ ವಾರ್ಷಿಕ ವರದಿ ವಾಚಿಸಿದರು.