ಗರಿಗರಿಯಾದ ಸ್ಕ್ವಿಡ್ ಕಟ್ಲೇಟ್​ ತಯಾರಿಸಿ ಆನಂದಿಸಿ..|Recipe

untitled-design-50-6890910c029ff
Published on

Recipe: ಮಳೆಗಾಲದ ಸಮಯದಲ್ಲಿ ಮಾನ್ಸೂನ್​ ಹನಿಗಳು ಕಿಟಕಿ ಮೇಲೆ ಬೀಳುತ್ತಿದ್ದಂತೆಯೇ ಏನಾದರೂ ತಿನ್ನಬೇಕೆಂಬ ಹಂಬಲ ಜಾಸ್ತಿಯಾಗುತ್ತದೆ. ಅಂತಹ ಸಮಯದಲ್ಲಿ ರುಚಿ ರುಚಿಯಾದ ಆಲುಗಡ್ಡೆ ಭಜಿಗಳು ಮತ್ತು ಪಕೋಡಗಳು ಯಾವಾಗಲೂ ಮಾಡುತ್ತಿರುತ್ತೇವೆ. ಈ ಬಾರಿ ಸಂಜೆಯ ತಿಂಡಿಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿ, ಈ ರೆಗ್ಯುಲರ್​ ಖಾದ್ಯವನ್ನು ಹೊರತು ಪಡಿಸಿ ಗರಂಗರಂ ಆದ ಸ್ಕ್ವಿಡ್ ಕಟ್ಲೇಟ್​ ಒಮ್ಮೆ ಟ್ರೈಮಾಡಿ...

ಬೇಕಾಗುವ ಪದಾರ್ಥಗಳು

*ಸ್ಕ್ವಿಡ್ ಮೀನು

* ಹುರಿಯಲು ಎಣ್ಣೆ

* ಬ್ರೆಡ್ ಚೂರುಗಳು

* 1 ಈರುಳ್ಳಿ

* ಕೊತ್ತಂಬರಿ ಸೊಪ್ಪು

* ಗರಂ ಮಸಾಲ

* ಅರಿಶಿನ ಪುಡಿ

* ಉಪ್ಪು

* ಮೆಣಸಿನ ಪುಡಿ

* ಶುಂಠಿ-ಬೆಳ್ಳುಳ್ಳಿ ಪೇಸ್ಟ್

*  1 ಮೊಟ್ಟೆ

ಮಾಡುವ ವಿಧಾನ

ಮೊದಲು ಸ್ಕ್ವಿಡ್ ಮೀನನ್ನು ಅದರ ತಲೆ, ಚರ್ಮ ತೆಗೆದು ಸ್ವಚ್ಚಗೊಳಿಸಿ ಬಿಸಿ ನೀರಿನಿಂದ ಚೆನ್ನಾಗಿ ತೊಳೆಯಬೇಕು. ನಂತರ ಒಂದು ಪಾತ್ರೆಯಲ್ಲಿ ನೀರು ಮತ್ತು ಚಿಟಿಕೆ ಉಪ್ಪು ಬೆರೆಸಿ, ಚೆನ್ನಾಗಿ ಕುದಿಸಿ ನಂತರ, ಒಂದು ಮಿಕ್ಸರ್​ ಬಳಸಿ ಪೇಸ್ಟ್​ ಆಗಿ ಪುಡಿ, ನಂತರ ಬ್ರೆಡ್​ಗಳನ್ನು ತೆಗೆದುಕೊಂಡು ಚಿಕ್ಕ ಚಿಕ್ಕ ಪುಡಿಗಳನ್ನಾಗಿ ಮಾಡಬೇಕು. ಒಂದು ಬಟ್ಟಲಿನಲ್ಲಿ ಸ್ಕ್ವೀಡ್​ ಪೇಸ್ಟ್ ಮತ್ತು ಬ್ರೆಡ್​ ತುಂಡುಗಳನ್ನು ಸೇರಿಸಿ, ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಮೆಣಸಿನ ಪುಡಿ, ಉಪ್ಪು ಮತ್ತು ಗರಂ ಮಸಾಲ ಪುಡಿಗಳನ್ನು ಸೇರಿಸಬೇಕು. ನಂತರ ಒಂದು ಮೊಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಸೇರಿಸಿ ಗಟ್ಟಿ ಮಿಶ್ರಣ ಮಾಡಬೇಕು. ಮಿಶ್ರಣದ ಸಣ್ಣ ಭಾಗಗಳನ್ನು ತೆಗೆದುಕೊಂಡು ಅವುಗಳನ್ನು ಕಟ್ಲೇಟ್​ ಆಕಾರದಲ್ಲಿ ಚಪ್ಪಟೆ ಮಾಡಿ, ಬ್ರೆಡ್​ ತುಂಡುಗಳಿಂದ ಲೇಪಿಸಬೇಕು. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಈ ಕಟ್ಲೇಟ್​ಗಳನ್ನು ಕಂದು ಬಣ್ಣ ಬರುವವರೆಗೂ ಡೀಪ್​ ಫ್ರೈ ಮಾಡಿ. ಸ್ವಲ್ಪ ತಣ್ಣಗಾದ ನಂತರ ಸೇವಿಸಿ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net