

ನವದೆಹಲಿ: ದೇಶದ ಹಲವೆಡೆ ಇಂದು ಮಕರ ಸಂಕ್ರಾಂತಿ ಆಚರಿಸುತ್ತಿದ್ದು, ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತಗೆ ಶುಭ ಹಾರೈಸಿದ್ದಾರೆ.
ಭಾರತದ ಹಲವಾರು ಭಾಗಗಳಲ್ಲಿ ಮಕರ ಸಂಕ್ರಾಂತಿಯನ್ನು ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಶುಭ ಉತ್ಸವವು ಭಾರತದ ವೈವಿಧ್ಯತೆ ಮತ್ತು ನಮ್ಮ ಸಂಪ್ರದಾಯಗಳ ಚೈತನ್ಯವನ್ನು ವಿವರಿಸುತ್ತದೆ. ಸಂಕ್ರಾಂತಿಯ ಪ್ರಕೃತಿ ತಾಯಿಯನ್ನು ಗೌರವಿಸುವ ಮಹತ್ವವನ್ನು ಪುನರುಚ್ಚರಿಸುತ್ತದೆ ಎಂದು ಟ್ವೀಟ್ ಮೂಲಕ ಪ್ರಧಾನಿ ಶುಭ ಕೋರಿದ್ದಾರೆ.
ತಮಿಳಿಗರಿಗೆ ಸಂಕ್ರಾಂತಿ ತುಂಬಾ ವಿಶೇಷವಾಗಿದ್ದು, ಪೊಂಗಲ್ ಎಂದೇ ಸ್ಥಳೀಯವಾಗಿ ಖ್ಯಾತಿಯಾಗಿದೆ. ಹೀಗಾಗಿ ವಿಶೇಷವಾಗಿ ತಮಿಳು ಸಹೋದರಿಯರು ಮತ್ತು ಸಹೋದರರಿಗೆ ಪೊಂಗಲ್ ಶುಭಾಶಯಗಳು ಎಂದು ಪ್ರಧಾನಿ ಶುಭ ಕೋರಿದ್ದಾರೆ.
ಅಲ್ಲದೆ, ಈ ವಿಶೇಷ ಉತ್ಸವವು ತಮಿಳು ಸಂಸ್ಕೃತಿಯ ಅತ್ಯುತ್ತಮತೆಯನ್ನು ತೋರಿಸುತ್ತದೆ. ಈ ಹಬ್ಬವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸಲು ಪ್ರೇರೇಪಿಸಲಿ ಎಂದು ಪ್ರಧಾನಿ ಹೇಳಿದ್ದಾರೆ. (ಏಜೆನ್ಸೀಸ್)