More

    ಬಿಎಸ್​ವೈ ಸಂಪುಟದಲ್ಲಿ 33 ಸಚಿವರು: ಯಾವ ಜಾತಿಗೆ ಎಷ್ಟು ಪ್ರಾತಿನಿಧ್ಯ ಸಿಕ್ತು? ಇಲ್ಲಿದೆ ಮಾಹಿತಿ

    ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದರೂ ಅದರಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ ಮಾಯವಾಗಿದೆ. ಸಂಪುಟದಲ್ಲಿ ಸದ್ಯ 33 ಸಚಿವರಿದ್ದು ಲಿಂಗಾಯತ, ಒಕ್ಕಲಿಗ, ಕುರುಬ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಲಭ್ಯವಾಗಿದ್ದರೆ, ಬಹುತೇಕ ಸಮುದಾಯಗಳು ವಂಚಿತವಾಗಿವೆ. 12 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲದಂತಾಗಿದ್ದು, ಅರ್ಧದಷ್ಟು ರಾಜ್ಯಕ್ಕೆ ಆಯಾ ಜಿಲ್ಲೆಯವರೇ ಉಸ್ತುವಾರಿಯಾಗುವುದು ತಪ್ಪಿದೆ. ಬೆಂಗಳೂರು, ಬೆಳಗಾವಿಗೆ ಹೆಚ್ಚು ಮನ್ನಣೆ ಸಿಕ್ಕಿದೆ. ಅದರ ಕಂಪ್ಲೀಟ್​ ಡೀಟೇಲ್ಸ್​ ಇಲ್ಲಿದೆ.

    ಯಾವ ಜಾತಿಯಿಂದ ಯಾರು?
    ಲಿಂಗಾಯತ: ಯಡಿಯೂರಪ್ಪ, ಸವದಿ, ಶೆಟ್ಟರ್, ವಿ.ಸೋಮಣ್ಣ, ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ್, ಉಮೇಶ್ ಕತ್ತಿ, ಮುರುಗೇಶ ನಿರಾಣಿ
    ಒಕ್ಕಲಿಗ: ಡಾ. ಅಶ್ವತ್ಥನಾರಾಯಣ್, ಅಶೋಕ್, ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್, ನಾರಾಯಣಸ್ವಾಮಿ, ಯೋಗೇಶ್ವರ್
    ಕುರುಬ: ಕೆ.ಎಸ್.ಈಶ್ವರಪ್ಪ, ಬಿ.ಎ.ಬಸವರಾಜ, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್
    ಪರಿಶಿಷ್ಟ ಜಾತಿ: ಗೋವಿಂದ ಕಾರಜೋಳ, ಎಸ್.ಅಂಗಾರ, ಅರವಿಂದ ಲಿಂಬಾವಳಿ, ಪ್ರಭು ಚವ್ಹಾಣ್
    ಬ್ರಾಹ್ಮಣ: ಸುರೇಶ್​ಕುಮಾರ್, ಶಿವರಾಮ ಹೆಬ್ಬಾರ್
    ಎಸ್​ಟಿ: ರಮೇಶ್ ಜಾರಕಿಹೊಳಿ, ಬಿ. ಶ್ರೀರಾಮುಲು
    ಹಿಂದುಳಿದ ವರ್ಗ: ಕೋಟ ಶ್ರೀನಿವಾಸಪೂಜಾರಿ (ಬಿಲ್ಲವ), ಆನಂದ ಸಿಂಗ್ (ರಜಪೂತ)
    ಜೈನ: ಶ್ರೀಮಂತ ಪಾಟೀಲ್

    ಯಾವ ಸಮುದಾಯಕ್ಕೆ ಎಷ್ಟು ಸ್ಥಾನ?
    ಲಿಂಗಾಯತ ಸಮುದಾಯದಿಂದ 11 ಮಂದಿ ಸಚಿವರಾಗಿದ್ದಾರೆ. ಹಾಗೇ ಒಕ್ಕಲಿಗ -7, ಕುರುಬ – 4, ಪ.ಜಾತಿ- 4, ಪ.ಪಂಗಡ – 2, ಹಿಂ.ವರ್ಗ- 2, ಬ್ರಾಹ್ಮಣ- 2, ಜೈನ ಸಮುದಾಯದಿಂದ ಒಬ್ಬರಿಗೆ ಅವಕಾಶ ಸಿಕ್ಕಿದೆ.

    ಜಿಲ್ಲಾ ಪ್ರಾತಿನಿಧ್ಯ
    ಬೆಂಗಳೂರು ನಗರ ಜಿಲ್ಲೆಯ 8 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ. ಹಾಗೇ ಬೆಳಗಾವಿ -5, ಹಾವೇರಿ -3, ಬಾಗಲಕೋಟೆ -2, ಶಿವಮೊಗ್ಗ -2, ಬೆಂ.ಗ್ರಾಮಾಂತರ -1, ರಾಮನಗರ- 1, ದಕ್ಷಿಣ ಕನ್ನಡ – 1, ಉಡುಪಿ -1, ಧಾರವಾಡ -1, ಚಿಕ್ಕಬಳ್ಳಾಪುರ -1, ಮಂಡ್ಯ -1, ಉತ್ತರ ಕನ್ನಡ -1, ಬೀದರ್ -1, ಚಿತ್ರದುರ್ಗ -1, ತುಮಕೂರು-1, ಗದಗ -1, ಬಳ್ಳಾರಿ ಜಿಲ್ಲೆಯ ಒಬ್ಬರಿಗೆ ಅವಕಾಶ ಸಿಕ್ಕಿದೆ.

    ಸಚಿವ ಸ್ಥಾನಕ್ಕೆ ಪ್ರಾತಿನಿಧ್ಯವಿಲ್ಲದ ಜಿಲ್ಲೆ
    ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಕೋಲಾರ, ದಾವಣಗೆರೆ, ಮೈಸೂರು, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವೇ ಇಲ್ಲದಂತಾಗಿದೆ.

    ಅಬಕಾರಿ ಸಚಿವ ಸ್ಥಾನಕ್ಕೆ ನಾಗೇಶ್​ ರಾಜೀನಾಮೆ ಕೊಟ್ಟಿದ್ದಕ್ಕೆ ಸ್ವಕ್ಷೇತ್ರದಲ್ಲೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ!

    ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

    ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts