

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಿಷನ್-150 ಗುರಿ ಸಾಧಿಸುವತ್ತ ಬಿಜೆಪಿ ವರಿಷ್ಠರು ತಯಾರಿ ಚುರುಕುಗೊಳಿಸಿದ್ದಾರೆ. ಸರ್ಕಾರದ ವರ್ಚಸ್ಸು ವೃದ್ಧಿ ಜತೆಗೆ ಪಕ್ಷದಲ್ಲೂ ಹುಮ್ಮಸ್ಸು ತುಂಬಿ, ರಣವ್ಯೂಹ ಜಾರಿಗೊಳಿಸುವ ಚಾಕಚಕ್ಯತೆಯ ತಂಡ ರಚನೆಗೆ ಮುಂದಾಗಿದ್ದಾರೆ.ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿ ಹೊಸ ತಂಡವನ್ನು ರಣಾಂಗಣಕ್ಕೆ ಇಳಿಸುವ ಚಿಂತನೆ ನಡೆಸಿದ್ದಾರೆ. ವೀರಶೈವ-ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಆದ್ಯತೆ ನೀಡುವ ಸಮತೋಲಿತ ಪಡೆ ರಚನೆಯು ರಣವ್ಯೂಹದ ಭಾಗವಾಗಿದೆ. ಜಾತಿವಾರು ಲೆಕ್ಕಾಚಾರಗಳು ಸದ್ಯದ ಚುನಾವಣಾ ರಾಜಕಾರಣದಲ್ಲಿ ಗೆಲುವು ಸಾಧಿಸಲು ಅನಿವಾರ್ಯವಾಗಿದೆ.
ಚೆಕ್ವೆುೕಟ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ತೇಲಿಬಿಟ್ಟಿರುವ ಒಕ್ಕಲಿಗ ಕಾರ್ಡ್ಗೆ ಕರಂದ್ಲಾಜೆ ಮೂಲಕ ಚೆಕ್ವೆುೕಟ್ ನೀಡುವುದು ಕಮಲ ಪಾಳೆಯದ ಲೆಕ್ಕಾಚಾರ. ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವ ಕನಸು ನನಸಾಗಲು ಕೆಲವು ಪ್ರಬಲ ಸಮುದಾಯಗಳು ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿವೆ. ಹಿಂದುಳಿದ ವರ್ಗಗಳು ಮತ್ತು ಶೋಷಿತ ಸಮುದಾಯಗಳಲ್ಲೂ ರಾಜಕೀಯ ಜಾಗೃತಿ ಬಲ್ಲ ಬಿಜೆಪಿ ದೆಹಲಿ ನಾಯಕರು ಪೂರಕವಾದ ಕಾರ್ಯತಂತ್ರ ಹೆಣೆಯಲಾರಂಭಿಸಿದ್ದಾರೆ. ಶೋಭಾ ಕರಂದ್ಲಾಜೆ ಬೆನ್ನಿಗೆ ಮಹಿಳೆ, ಒಕ್ಕಲಿಗ ಸಮುದಾಯ, ಸಚಿವರಾಗಿ ಪಳಗಿದವರು ಎಂಬ ಪ್ಲಸ್ ಪಾಯಿಂಟ್ಗಳ ಜತೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಪೂರ್ಣ ಸಾಥ್ ನೀಡುವ ಮುಂದಾಲೋಚನೆ ವರಿಷ್ಠರದು. ಈ ಹಿಂದೆ ಬಿಎಸ್ವೈ ಸಂಪುಟದ ಸದಸ್ಯೆಯಾಗಿ ಕೆಲಸ ಮಾಡಿದವರಷ್ಟೇ ಅಲ್ಲ, 2008ರ ಚುನಾವಣೆ ಪೂರ್ವ ರಾಜ್ಯ ಪ್ರವಾಸದಲ್ಲಿ ಹೆಗಲುಕೊಟ್ಟು ಶ್ರಮಿಸಿದವರು. ಕೇಂದ್ರ ರೈತ ಕಲ್ಯಾಣ ರಾಜ್ಯ ಸಚಿವೆ, ಉತ್ತರಪ್ರದೇಶದ ಚುನಾವಣೆ ಉಸ್ತುವಾರಿ ನಿಭಾಯಿಸಿದ ರೀತಿ ಪ್ರಧಾನಿ ಮೋದಿ, ಅಮಿತ್ ಷಾ ಗಮನಕ್ಕೂ ಬಂದಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಚಿವ ವಿ. ಸುನಿಲ್ಕುಮಾರ್ ಹೆಸರು ಕೂಡ ಕೇಳಿಬರುತ್ತಿವೆ. ಆದರೂ ಕೆಲವು ನಾಯಕರಿಂದ ಅಸಹಕಾರ, ಆಕ್ಷೇಪ ವ್ಯಕ್ತವಾಗಲಿದೆ ಎಂಬ ಅನುಮಾನ ವರಿಷ್ಠರನ್ನು ಕಾಡುತ್ತಿದೆ. ಹೀಗಾಗಿ ಹಾಲಿ ರಾಜ್ಯಾಧ್ಯಕ್ಷರ ಅವಧಿ ಆಗಸ್ಟ್ಗೆ ಮುಗಿದ ನಂತರ ಶೋಭಾ ಕರಂದ್ಲಾಜೆಗೆ ಸಾರಥ್ಯ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಹೊಸ ಟೀಮ್ೆ ಪ್ರಧಾನ ಕಾರ್ಯದರ್ಶಿಗಳಾಗಿ ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ, ಕುಡಚಿ ಶಾಸಕ ರಾಜೀವ್ ಸೇರ್ಪಡೆಯಾಗುವ ಸಾಧ್ಯತೆಗಳಿವೆ.
ಬಿಎಸ್ವೈ ಪುತ್ರ, ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಮಹತ್ವದ ಹೊಣೆಗಾರಿಕೆ ನೀಡಲು ದೆಹಲಿ ನಾಯಕರು ಯೋಚಿಸಿದ್ದಾರೆ. ವಿಧಾನಸಭೆಯಿಂದ ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗೆ ಪಕ್ಷದ ಕೋರ್ ಕಮಿಟಿ ಶಿಫಾರಸು ಮಾಡಿದ ಹೆಸರುಗಳಲ್ಲಿ ವಿಜಯೇಂದ್ರ ಹೆಸರಿತ್ತು. ಅಂತಿಮವಾಗಿ ಪ್ರಕಟವಾದ ಅಧಿಕೃತ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಇದು, ಹಲವರ ಅಚ್ಚರಿ, ಅಸಮಾಧಾನಕ್ಕೂ ಎಡೆಮಾಡಿಕೊಟ್ಟಿತ್ತು. ಉಪ ಚುನಾವಣೆಗಳಲ್ಲಿ ನೆಲೆಯಿಲ್ಲದ ಕಡೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬಿವೈವಿ ಕಾರಣರಾಗಿದ್ದನ್ನು ಕಡೆಗಣಿಸಲಾಗಿದೆ ಎಂಬ ಅಪಸ್ವರ ಭುಗಿಲೆದ್ದಿತ್ತು. ಅಸಮಾಧಾನ ತಣಿಸುವ ಯತ್ನವಾಗಿ ಬಿಎಸ್ವೈಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮೊಬೈಲ್ನಲ್ಲಿ ಸಂರ್ಪಸಿ ಮನವೊಲಿಸಿದ್ದರು. ಅಷ್ಟೇ ಅಲ್ಲ, ವಿಜಯೇಂದ್ರಗೆ ಉತ್ತಮ ರಾಜಕೀಯ ಭವಿಷ್ಯವಿದೆ. ಉನ್ನತ ಜವಾಬ್ದಾರಿ ಹೊರುವ ಸಾಮರ್ಥ್ಯವಿದೆ ಎಂದು ಪಕ್ಷದ ರಾಷ್ಟ್ರೀಯ ಜೆ.ಪಿ. ನಡ್ಡಾ ಹೇಳಿದ್ದರು ಎನ್ನಲಾಗಿದೆ.
ಬೆಂಗಳೂರು: ನಿಗಮ-ಮಂಡಳಿ, ಪ್ರಾಧಿಕಾರಿಗಳು ಶೀಘ್ರವೇ ಪುನಾರಚನೆಯಾಗಲಿವೆ ಎಂಬ ನಿರೀಕ್ಷೆಯ ನಡುವೆ ನಾಮ ನಿರ್ದೇಶನ ರದ್ದು ಪ್ರಕ್ರಿಯೆ ಮುಂದುವರಿದಿದೆ. 12 ಪ್ರಾಧಿಕಾರಗಳ ಅಧ್ಯಕ್ಷರ ನೇಮಕವನ್ನು ರದ್ದುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಹಾಲಿ ಅಧ್ಯಕ್ಷ-ಉಪಾಧ್ಯಕ್ಷರಿಂದ ರಾಜೀನಾಮೆ ಪಡೆಯುವ ಬದಲು ರದ್ದು ಆದೇಶ ಹೊರಡಿಸಿ ವಾರವೇ ಕಳೆದಿದೆ. ಒಟ್ಟಿಗೆ 52 ನೇಮಕಗಳು ರದ್ದಾಗಿದ್ದರಿಂದ ಇನ್ನೇನು ಪುನಾರಚನೆ ಆಗಿಬಿಡಲಿದೆ ಎಂಬ ಮುಖಂಡರ, ಕಾರ್ಯಕರ್ತರ ಅಪೇಕ್ಷೆ ಮುಂದೂಡುತ್ತಲೇ ಸಾಗಿದೆ. ಈ ಮಧ್ಯೆ ಮತ್ತೊಂದು ಕಂತಿನಲ್ಲಿ ನೇಮಕ ರದ್ದಾಗಿದ್ದು, ಹಾವೇರಿ, ಕೆಜಿಎಫ್, ಹುಬ್ಬಳ್ಳಿ-ಧಾರವಾಡ, ಹೊಸಪೇಟೆ, ಮಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು, ಮಡಿಕೇರಿ, ಬಾಗಲಕೋಟೆ ಮತ್ತು ಕಲಬುರಗಿ ಪ್ರಾಧಿಕಾರಗಳ ಅಧ್ಯಕ್ಷರ ನಾಮ ನಿರ್ದೇಶನ ರದ್ದುಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಹೆಚ್ಚಿದ ಕಾತುರ: ಶಾಸಕರು, ಕೆಲವು ಮಾಜಿ ಶಾಸಕರು ಹೊರತುಪಡಿಸಿ ಬಹುತೇಕ ಸ್ಥಾನಗಳು ತೆರವಾಗಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ದುಡಿದ ಹಿರಿಯ ಕಾರ್ಯಕರ್ತರಿಗೆ ಮಣೆ ಹಾಕುವ ತರ್ಕವಿದೆ. ಸರಣಿ ಚುನಾವಣೆಗಳು ಹೊಸ್ತಿಲಲ್ಲಿದ್ದು ನೇಮಕದ ಪದಾವಧಿ ಹೆಚ್ಚಿನ ದಿನ ಉಳಿಯದು ಎಂಬ ಕಾರಣಕ್ಕೆ ಕಾರ್ಯಕರ್ತರಲ್ಲಿ ಆದಷ್ಟು ಬೇಗ ಅಧಿಕಾರವಹಿಸಿಕೊಳ್ಳಬೇಕೆಂಬ ಕಾತುರ ಹೆಚ್ಚಿದೆ. ಶಾಸಕರುಗಳ ಅಪಸ್ವರ: ಯಾವ್ಯಾವ ನಿಗಮಕ್ಕೆ ಯಾರ್ಯಾರನ್ನು ನೇಮಕ ಮಾಡಬೇಕು ಎನ್ನುವ ಪಟ್ಟಿಯನ್ನು ಬಿಜೆಪಿ ಸಿದ್ಧಪಡಿಸಿಕೊಟ್ಟಿದ್ದರೂ, ಅದಕ್ಕೆ ಶಾಸಕರು ಮತ್ತು ಸಚಿವರುಗಳೇ ಅಪಸ್ವರ ಎತ್ತಿರುವುದು ಬೆಳಕಿಗೆ ಬಂದಿದೆ.
ಚುನಾವಣೆ ಹೊತ್ತಿನಲ್ಲಿ ನೇಮಕ ಮಾಡುವ ಸಂದರ್ಭದಲ್ಲಿ ನೀವು ನಮ್ಮಗಳ ಗಮನಕ್ಕೆ ತರಬೇಕು. ನಮ್ಮ ಕ್ಷೇತ್ರದಲ್ಲಿನ ಪರಿಸ್ಥಿತಿ ಏನು ಎನ್ನುವುದು ಶಾಸಕರುಗಳಾದ ನಮಗೆ ಗೊತ್ತು. ನೀವು ಯಾರದೊ ಮೂಲಕ ಪಟ್ಟಿಯಲ್ಲಿ ಹೆಸರನ್ನು ಹಾಕಿ ಕಳುಹಿಸಿದರೆ ಅದನ್ನು ಒಪು್ಪವುದು ಹೇಗೆ? ಚುನಾವಣೆ ಎದುರಿಸಬೇಕಾದವರು ನಾವು ತಾನೇ? ಎನ್ನುವ ಪ್ರಶ್ನೆಯನ್ನು ಎತ್ತಿರುವುದು ಮುಖ್ಯಮಂತ್ರಿಗೂ ಇರುಸು ಮುರುಸು ತಂದಿದೆ.