

ತಿ.ನರಸೀಪುರ: ಮೈಮುಲ್ನಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಡಾ.ಸಿ.ದಿವಾಕರ್ ಅವರಿಗೆ ತಿ.ನರಸೀಪುರ ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಪಟ್ಟಣದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮೈಮುಲ್ ನಿರ್ದೇಶಕ ಚೆಲುವರಾಜು ಮಾತನಾಡಿ, ಡಾ.ಸಿ.ದಿವಾಕರ್ ಅವರು ತಮ್ಮ ಸೇವಾವಧಿಯಲ್ಲಿ ಗ್ರಾಮೀಣ ಭಾಗದ ಹೈನುಗಾರರೊಂದಿಗೆ ನಿರಂತರ ಸಂಪರ್ಕಹೊಂದಿದ್ದರು. ಹೈನುಗಾರಿಕೆ ಮಾಡಲು ಅನುಸರಿಸಬೇಕಾದ ಮಾರ್ಗೋಪಾಯಗಳ ಕುರಿತಂತೆ ರೈತರಿಗೆ ತಿಳಿವಳಿಕೆ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.
ಇದೇ ವೇಳೆ ಉಪ ವ್ಯವಸ್ಥಾಪಕರಾಗಿ ನೂತನವಾಗಿ ನಿಯೋಜನೆಗೊಂಡ ಎಲ್.ಆರ್.ಕರಿಬಸವರಾಜು ಅವರಿಗೆ ಸ್ವಾಗತ ಕೋರಲಾಯಿತು. ಮೈಮುಲ್ ಮಾಜಿ ಅಧ್ಯಕ್ಷ ಓಂಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗರಾಜು, ಮಾಜಿ ನಿರ್ದೇಶಕ ಕೆ.ಬಿ.ಪ್ರಭಾಕರ್, ವ್ಯವಸ್ಥಾಪಕಿ ಸೌಮ್ಯಾ, ಸಹಾಯಕ ವ್ಯವಸ್ಥಾಪಕ ನಿಶ್ಚಿತ್ ಕುಮಾರ್, ಡೇರಿ ಅಧ್ಯಕ್ಷರಾದ ನರೇಂದ್ರ, ಸಿದ್ದಪ್ಪ, ದೊಡ್ಡ ರಮೇಶ್, ಮೂಗೂರು ನಾಗೇಂದ್ರ, ಪ್ರಗತಿಪರ ಹಾಲು ಉತ್ಪಾದಕ ಜಯರಾಂ, ಮಾರ್ಗ ವಿಸ್ತರಣಾಧಿಕಾರಿ ಆರ್.ಪ್ರಮೋದ್, ದಿವ್ಯಾ, ನೌಕರರ ಸಂಘದ ಅಧ್ಯಕ್ಷ ಕುಳ್ಳೇಗೌಡ ಮತ್ತಿತರರಿದ್ದರು.