

ಪಶ್ಚಿಮ ಬಂಗಾಳ: ಇಂದು (ಏ.18) ಲೋಕಸಭಾ ಚುನಾವಣೆಯ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾಗೆ ಸ್ಥಳೀಯ ವರದಿಗಾರರೊಬ್ಬರು ನಿಮ್ಮ ಶಕ್ತಿಯ ಮೂಲವೇನು ಎಂದು ಕೇಳಿದ ಪ್ರಶ್ನೆಗೆ ಆಕೆ ಕೊಟ್ಟ ಉತ್ತರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮಹುವಾ ಹೇಳಿಕೆಗೆ ನೆಟ್ಟಿಗರಿಂದ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.
ಗ್ರಾಮೀಣ ಭಾಗದಲ್ಲಿ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದ ಮಹುವಾಗೆ ವರದಿಗಾರರೊಬ್ಬರು ನಿಮ್ಮ ಶಕ್ತಿಯ ಮೂಲವೇನು ಎಂದು ನೇರವಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಟಿಎಂಸಿ ನಾಯಕಿ, "ಸೆಕ್ಸ್" ಎಂದು ಹೇಳಿದರು. ಸದ್ಯ ಈ ಹೇಳಿಕೆ ಹೊರಬೀಳುತ್ತಿದ್ದಂತೆ ನೆಟ್ಟಿಗರು ಮೊಯಿತ್ರಾರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಮನಬಂದಂತೆ ಟೀಕಿಸುತ್ತಿದ್ದಾರೆ.
ಕೃಷ್ಣಾನಗರದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಸ್ಥಳೀಯ ಬಂಗಾಳಿ ಟಿವಿ ವರದಿಗಾರರ ಪ್ರಶ್ನೆಗೆ ಮಹುವಾ, ಲೈಂಗಿಕತೆಯು ತನಗೆ ಶಕ್ತಿ ನೀಡುತ್ತದೆ ಎಂದು ಓಪನ್ ಆಗಿ ಹೇಳಿಕೆ ನೀಡಿದ್ದು ಸದ್ಯ ಎಲ್ಲರಿಗೂ ಭಾರೀ ಆಶ್ಚರ್ಯ ತಂದೊಡ್ಡಿದೆ. ಈ ವೈರಲ್ ವೀಡಿಯೊವನ್ನು ನೋಡಿದ ನೆಟಿಗರೊಬ್ಬರು, "ಇದು ಟಿಕೆಟ್ ಪಡೆಯುವ ಮೂಲ" ಎಂದು ಕಮೆಂಟ್ ಮಾಡಿ ಟೀಕಿಸಿದ್ದಾರೆ,(ಏಜೆನ್ಸೀಸ್).