ಮಹಿಷಾ ದಸರಾ ನಡೆಯಲು ಬಿಡಲ್ಲ

Prathap Simha
Published on


ಮೈಸೂರು: ಮಹಿಷಾ ದಸರಾ ನಡೆಯಲು ಬಿಡಲ್ಲ. ಚಾಮುಂಡಿಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ಮುಂದಾದರೆ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತಾ ಚಾಮುಂಡಿ ಭಕ್ತರ ಕೈ ಮೇಲಾಗುತ್ತಾ ನೋಡೇ ಬಿಡೋಣ ಎಂದು ಮಹಿಷಾ ದಸರಾ ಆಚರಣಾ ಸಮಿತಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.
ಮಹಿಷನ ಮೇಲೆ ನಂಬಿಕೆ ಇದ್ದರೆ ಮನೆಯಲ್ಲೇ ಪೂಜೆ ಮಾಡಿಕೊಳ್ಳಲಿ. ಹಿಂದು ಸಮಾಜವಾಗಿ ನಾವೆಲ್ಲಾ ಒಟ್ಟಾಗಿ ಇರೋಣ. ಮಹಿಷಾ ದಸರಾ ಹೆಸರಿನಲ್ಲಿ ಒಡಕು ಮೂಡಿಸಿಕೊಳ್ಳುವುದು ಬೇಡ. ಮುಂದೊಂದು ದಿನ ಮಹಿಷನ ಮೆರವಣಿಗೆ ಮೇಲೂ ಮುಸ್ಲಿಮರು ಕಲ್ಲು ಎಸೆಯುತ್ತಾರೆ. ಮಹಿಷಾ ದಸರಾ ಮಾಡಲು ಚಾಮುಂಡಿಬೆಟ್ಟ ಸರಿಯಾದ ಜಾಗವಲ್ಲ ಎಂದರು.
ಚಾಮುಂಡಿಬೆಟ್ಟದಲ್ಲಿ ಮಹಿಷಾ ದಸರಾ ಮಾಡುತ್ತೇವೆ ಅಂದರೆ ಚಾಮುಂಡಿ ಭಕ್ತರು ಕೂಡ ಅಂದೇ ಚಾಮುಂಡಿಬೆಟ್ಟ ಚಲೋ ಮಾಡುತ್ತೇವೆ. ಕಳೆದ ವರ್ಷದಂತೆಯೇ ಈ ಬಾರಿಯೂ ಬೆಟ್ಟದಲ್ಲಿ ಆಚರಣೆ ಮಾಡಲು ನಾವು ಬಿಡಲ್ಲ. ಮಹಿಷಾಸುರ, ಕಂಸ, ರಾವಣ ಯಾರನ್ನಾದರೂ ಮನೆಯಲ್ಲಿ ಆರಾಧನೆ ಮಾಡಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net