

ಇಸ್ಲಾಮಾಬಾದ್: ಪಾಕಿಸ್ತಾನಿ ನಟಿ ಮಹಿರಾ ಖಾನ್(Mahira Khan) 2017ರಲ್ಲಿ ಬಾಲಿವುಡ್ ಕಿಂಗ್ಖಾನ್ ಶಾರೂಖ್ ಜತೆ ಸಿನಿಮಾ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಬಿಟೌನ್ ಕಿಂಗ್ ಹೆಸರು ತೆಗೆದುಕೊಂಡಗೆಲ್ಲಾ ಪ್ರತಿ ಬಾರಿಯೂ ಆಕೆಯನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸುತ್ತಿದ್ದಾರೆ. ಸದ್ಯ ಈ ಬಗ್ಗೆ ಮೌನ ಮುರಿದಿರುವ ಮಹೀರಾ ಖಾನ್ ಸ್ಪಷ್ಟನೆ ನೀಡಿದ್ದಾರೆ.
ಕರಾಚಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮಹೀರಾ ಖಾನ್ ತನ್ನನ್ನು ಟ್ರೋಲ್ ಮಾಡುತ್ತಿರುವವರಿಗೆ ತಕ್ಕ ಉತ್ತರ ನೀಡಿದ್ದಾರೆ. ನಾನು ಎಂದಿಗೂ ಬೇಕೆಂದು ಶಾರೂಖ್ ಹೆಸರು ತೆಗೆಕೊಳ್ಳುವುದಿಲ್ಲ. ಪ್ರತಿ ಸಂದರ್ಶನದಲ್ಲೂ ಶಾರೂಖ್ ಜತೆ ಸಿನಿಮಾಲ್ಲಿ ನಟಿಸಿರುವ ಅನುಭವದ ಬಗ್ಗೆ ಕೇಳಲಾಗುತ್ತದೆ. ಆದ್ದರಿಂದ ಯಾರಾದರೂ ನನ್ನನ್ನು ಈ ಪ್ರಶ್ನೆ ಕೇಳಿದಾಗ ಅವರಿಗೆ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ಎಂದಿಗೂ ನನ್ನ ಸ್ವಇಚ್ಛೆಯಿಂದ ಶಾರೂಖ್ ಕುರಿತು ಮಾತನಾಡುವುದಿಲ್ಲ. ನೀವು ಮತ್ತೆ ಅವರ ಬಗ್ಗೆ ನನ್ನನ್ನು ಕೇಳುವುದಿಲ್ಲ ಎಂದು ನನಗೆ ತೋರುತ್ತದೆ ಎಂದು ತಿಳಿಸಿದರು.
ಮಹೀರಾ ಪಾಕಿಸ್ತಾನದ ಪ್ರಸಿದ್ಧ ನಟಿ. ಹಮ್ಸಫರ್ ಧಾರಾವಾಹಿಯ ಮೂಲಕ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಬಳಿಕ 2017ರಲ್ಲಿ ರಯೀಸ್ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಮಹಿರಾ ಒಮ್ಮೆ ಶಾರೂಖ್ ಅವರನ್ನು ತನ್ನ ಬಾಲ್ಯದ ಪ್ರೀತಿ ಎಂದು ಕರೆದಿದ್ದರು. ಮಹೀರಾ ಖಾನ್ 2025ರಲ್ಲಿ ನೀಲೋಫರ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.(ಏಜೆನ್ಸೀಸ್)