ಪೂಜೆ ಮಾಡುವ ವೇಳೆ ಶೋ ರೂಮ್​ನಿಂದ ಕೆಳಗೆ ಬಿದ್ದ ಮಹೀಂದ್ರಾ ಥಾರ್: ವಿಡಿಯೋ ವೈರಲ್​ | Mahindra Thar

Untitled design - 2025-09-10T153107.403
Published on

Mahindra Thar: ಪೂರ್ವ ದೆಹಲಿಯ ಶೋ ರೂಮ್​ ಒಂದರಲ್ಲಿ ಮಹಿಳೆಯೊಬ್ಬಳು ಏಕಾಏಕಿ ಆಕ್ಸಿಲರೇಟರ್ ತುಳಿದ ಹಿನ್ನೆಲೆ ಹೊಸ ಮಹೀಂದ್ರಾ ಥಾರ್ ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ. ಅಪಘಾತದ ನಂತರ ವೈರಲ್​ ವಿಡಿಯೋದಲ್ಲಿ ಕಾರು ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಪಿಟಿಐ ಪ್ರಕಾರ, ಸೋಮವಾರ ಸಂಜೆ ಕಾರು ಖರೀದಿಸಿದ ಬಳಿಕ ಧಾರ್ಮಿಕ ಪೂಜೆ ಮಾಡುವ ವೇಳೆ(ಕಾರಿಗೆ ಪೂಜೆ) ಮಹಿಳೆಯೊಬ್ಬಳು ಆಕ್ಸಿಲರೇಟರ್​ ಮೇಲೆ ಆಕಸ್ಮಿಕವಾಗಿ ಕಾಲಿಟ್ಟಿದ್ದಾರೆ.

"ಮಾಲೀಕರು ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿದ್ದರಿಂದ ಕಾರು ಶೋ ರೂಂನ ಗಾಜಿನ ಗೋಡೆಯನ್ನು ಭೇದಿಸಿ ನೆಲಕ್ಕೆ ಬಿದ್ದಿತು. ಒಂದು ಮೋಟಾರ್ ಸೈಕಲ್ ಕೂಡ ಹಾನಿಗೊಳಗಾಯಿತು. ಯಾವುದೆ ಪ್ರಾಣ ಹಾನಿ ಆಗಿಲ್ಲ ಎಂದು ಶೋರೂಮ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐಗೆ ತಿಳಿಸಿದ್ದಾರೆ.

ಇನ್ನು ಕಾರು ಖರೀದಿದಾರರಾದ 29ರ ಮಾನಿ ಪವಾರ್ ಎಂಬ ಮಹಿಳೆ ಧಾರ್ಮಿಕ ಪೂಜೆ ಮಾಡುವಾಗ(ಕಾರಿನ ಕೆಳಗೆ ನಿಂಬೆ ಹಣ್ಣು) ಆಕಸ್ಮಿಕವಾಗಿ ಕಾರು ಚಲಾಯಿಸಿದ್ದಾರೆ. ಈ ಹಿನ್ನೆಲೆ ಶೋ ರೂಂನ ಗಾಜಿನ ಗೋಡೆಯನ್ನು ಭೇದಿಸಿ ನೆಲಕ್ಕೆ ಬಿದ್ದಿತು ಎಂದು ಎನ್​ಡಿಟಿವಿ ವರದಿ ಮಾಡಿದೆ. ಆದರೆ, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net