ಮತ್ತೊಮ್ಮೆ ದಾಖಲೆ ಬರೆದ ಮಹೇಶ್​ ಬಾಬು ನಟನೆಯ ರಿ-ರಿಲೀಸ್​ ಚಿತ್ರ; ಜಾಗತಿಕವಾಗಿ 5.31 ಕೋಟಿ ರೂ. ಗಳಿಕೆ!

Untitled design - 2023-08-11T204449.039
Published on

ಆಂಧ್ರಪ್ರದೇಶ: ಟಾಲಿವುಡ್​, ಕಾಲಿವುಡ್​ ಅಂಗಳದಲ್ಲಿ ಸದ್ಯ ಸ್ಟಾರ್​ ನಟರು ಅಭಿನಯದ ಹಳೇ ಸಿನಿಮಾಗಳನ್ನು ಅವರ ಜನ್ಮದಿನಕ್ಕೆ ರಿ-ರಿಲೀಸ್ ಮಾಡುವ ಪ್ರವೃತ್ತಿ ಕಳೆದ ಹಲವು ತಿಂಗಳಿನಿಂದ ಹೆಚ್ಚಾಗಿದೆ. ಈ ಪೈಕಿ ತೆಲುಗು ಚಿತ್ರರಂಗದ ಸ್ಟಾರ್​ ನಟ, ಪ್ರಿನ್ಸ್ ಮಹೇಶ್​ ಬಾಬು ಅವರ ಹುಟ್ಟುಹಬ್ಬಕ್ಕೆ ಅವರ ಬ್ಲಾಕ್​​ಬಸ್ಟರ್​ ಹಿಟ್​ 'ಬಿಸಿನೆಸ್​ ಮ್ಯಾನ್' ಚಿತ್ರವನ್ನು ಮರು ಬಿಡುಗಡೆ ಮಾಡಲಾಗಿತ್ತು. ಈ ಚಿತ್ರವು ಇದೀಗ ಮತ್ತೊಮ್ಮೆ ಹೊಸ ದಾಖಲೆಯನ್ನು ಬರೆದಿದೆ.

​ಕ್ಲಾಸಿಕ್ ಚಿತ್ರಗಳನ್ನು ರಿ-ರಿಲೀಸ್​ ಮಾಡುವ ಹೊಸ ಟ್ರೆಂಡ್ ಮತ್ತೊಮ್ಮೆ ಸಿನಿಪ್ರೇಕ್ಷಕರ ಗಮನ ಸೆಳೆದಿದೆ. ಮಹೇಶ್​ ಬಾಬು ಅವರ ಜನ್ಮದಿನದಂದು ಬಿಡುಗಡೆಯಾದ 'ಬಿಸಿನೆಸ್​ ಮ್ಯಾನ್' ಚಿತ್ರವು ಇದೀಗ ಸಾರ್ವಕಾಲಿಕ ದಾಖಲೆಯಾಗಿದ್ದು, ಜಾಗತಿಕವಾಗಿ ಗಲ್ಲಾಪೆಟ್ಟಿಗೆಯಲ್ಲಿ 5.31 ಕೋಟಿ ರೂ. ಗಳಿಕೆಯನ್ನು ಕಂಡಿದೆ. ಈ ಸಂಗತಿ ಪ್ರಿನ್ಸ್​ ಫ್ಯಾನ್ಸ್​ಗೆ​ ಭಾರೀ ಸಂತಸ ತಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡಕ್ಕೆ ಮತ್ತು ತಮ್ಮ ನೆಚ್ಚಿನ ನಟನಿಗೆ ಅಭಿನಂದನೆ ತಿಳಿಸಿದ್ದಾರೆ.

ಚಿತ್ರದ ಒಟ್ಟು ಕಲೆಕ್ಷನ್ 5.31 ಕೋಟಿ ರೂ.​ ಅನ್ನು ಫ್ಯಾನ್ಸ್​, ಮಹೇಶ್ ಬಾಬು ಫೌಂಡೇಶನ್‌ಗೆ ದಾನ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ನಟನ ಮೇಲಿರುವ ತಮ್ಮ ಪ್ರೀತಿ, ಅಭಿಮಾನವನ್ನು ತೋರಿದ್ದಾರೆ. ಟ್ರಸ್ಟ್​​​ಗೆ ತಲುಪಿದ ಹಣ ಹೃದಯ ಶಸ್ತ್ರ ಚಿಕಿತ್ಸೆಗೆ, ಶೈಕ್ಷಣಿಕ ವಿದ್ಯಾರ್ಥಿವೇತನವನ್ನು ಒದಗಿಸಲು ಸೇರಿದಂತೆ ಇತರ ಸಾಮಾಜಿಕ ಕೆಲಸಗಳಿಗೆ ಈ ಹಣವನ್ನು ವಿನಿಯೋಗ ಮಾಡಲಾಗುತ್ತದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net