

ಮುಂಬೈ: ಮಹಾತ್ಮ ಗಾಂಧಿ(Mahatma Gandhi) ಅವರು ಭಾರತದ ರಾಷ್ಟ್ರಪಿತ ಅಲ್ಲ, ಅವರು ಪಾಕಿಸ್ತಾನದ ಪಿತಾಮಹ ಎಂದು ಹಿನ್ನೆಲೆ ಗಾಯಕ ಅಭಿಜೀತ್ ಭಟ್ಟಾಚಾರ್ಯ ವಿವಾದತ್ಮಾಕ ಹೇಳಿಕೆ ನೀಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ಪತ್ರಕರ್ತ ಶುಭಂಕರ್ ಮಿಶ್ರಾ ಅವರೊಂದಿಗೆ ನಡೆದ ಪಾಡ್ಕಾಸ್ಟ್ ಸಂವಾದದಲ್ಲಿ ಸಂಗೀತ ಸಂಯೋಜಕ ಆರ್ಡಿ ಬರ್ಮನ್ ಕುರಿತು ಮಾತನಾಡುವ ವೇಳೆ '' ಮಹಾತ್ಮ ಗಾಂಧಿಗಿಂತ ಸಂಗೀತ ಸಂಯೋಜಕ ಆರ್ಡಿ ಬರ್ಮನ್ ದೊಡ್ಡವರಾಗಿದ್ದರು. ಮಹಾತ್ಮ ಗಾಂಧಿಯವರು ರಾಷ್ಟ್ರಪಿತರಾಗಿದ್ದಂತೆ, ಆರ್ಡಿ ಬರ್ಮನ್ ಅವರು, ಸಂಗೀತ ಪ್ರಪಂಚಕ್ಕೆ ರಾಷ್ಟ್ರಪಿತ'' ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು, ಮಹಾತ್ಮ ಗಾಂಧಿ ಅವರು ಪಾಕಿಸ್ತಾನಕ್ಕೆ ರಾಷ್ಟ್ರಪಿತರಾಗಿದ್ದರು, ಭಾರತಕ್ಕಾಗಿ ಅಲ್ಲ. ಭಾರತ ಯಾವಾಗಲೂ ಇತ್ತು. ಪಾಕಿಸ್ತಾನವನ್ನು ರಚಿಸಲಾಯಿತು. ತಪ್ಪಾಗಿ, ಮಹಾತ್ಮ ಗಾಂಧಿ ಅವರನ್ನ ನಮ್ಮ ರಾಷ್ಟ್ರದ ಪಿತಾಮಹ ಎಂದು ಕರೆಯುತ್ತಾರೆ ಎಂದು ಭಟ್ಟಾಚಾರ್ಯ ವಿವಾದತ್ಮಾಕವಾಗಿ ಹೇಳಿದ್ದಾರೆ.
ಅಭಿಜಿತ್ ಭಟ್ಟಾಚಾರ್ಯ ಯಾರು? ಹಿನ್ನೆಲೆ ಗಾಯಕ ಅಭಿಜೀತ್ ಭಟ್ಟಾಚಾರ್ಯ ಅವರು ಹಿಂದಿ ಸಂಗೀತ ಉದ್ಯಮದಲ್ಲಿ ಪ್ರಸಿದ್ಧ ಸಂಗೀತ ಸಂಯೋಜಕ ಆರ್ಡಿ ಬರ್ಮನ್ ಅವರೊಂದಿಗೆ ಪಾದಾರ್ಪಣೆ ಮಾಡಿದ ಇವರು ಆಶಾ ಭೋಂಸ್ಲೆಯವರೊಂದಿಗೆ ಯುಗಳ ಗೀತೆಯೊಂದಿಗೆ ಅವರು ಮೊದಲು ಗುರುತಿಸಿಕೊಂಡರು,(ಏಜೆನ್ಸೀಸ್).