ಮಹಾತ್ಮ ಗಾಂಧೀಜಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಸೃಷ್ಟಿ ಪ್ರಥಮ

7 smg 4
Published on

ಶಿವಮೊಗ್ಗ: ನಗರದ ಬೆಕ್ಕಿನ ಕಲ್ಮಠದ ಶ್ರೀ ಚನ್ನಬಸವೇಶ್ವರ ಪ್ರೌಢಶಾಲೆಯಯಲ್ಲಿ ಕರ್ನಾಟಕ ಸರ್ವೋದಯ ಮಂಡಲದಿಂದ ಮಹಾತ್ಮ ಗಾಂಧೀಜಿ ಅವರ ತತ್ವ ಚಿಂತನೆಗಳ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸೃಷ್ಟಿ ಬಾಯಿ ಪ್ರಥಮ ಸ್ಥಾನ ಪಡೆದರು.

ಶಾಲೆಯಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಾದ ಆಯಿಷಾ ದ್ವಿತೀಯ ಮತ್ತು 9ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ತೃತೀಯ ಬಹುಮಾನ ಪಡೆದರೆ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ದಿವ್ಯಾಶ್ರೀ ಸಾನಿಯಾ ಸಮಾಧಾನಕರ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರು.

ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಮೃತ್ಯುಂಜಯ ಜಕ್ಲಿಮಠ್, ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಎಚ್.ರಂಗಸ್ವಾಮಿ, ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷೆ ಡಾ. ಎನ್.ಆರ್.ಮಂಜುಳಾ, ಕಾರ್ಯದರ್ಶಿ ಡಾ. ಎಂ.ಬಿ.ಸಾವಿತ್ರಮ್ಮ ಪಾಲಾಕ್ಷಪ್ಪ, ಕನ್ನಡ ಶಿಕ್ಷಕ ಡಿ.ಕರಿಬಸಯ್ಯ, ಸುಮಾ ಹೆಗ್ಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net