‘ದೃಶ್ಯಂ’ ಸ್ಟೈಲ್​ನಲ್ಲೇ ಗೆಳತಿಯನ್ನು ಕೊಂದು ಹೂತಿಟ್ಟ ಯೋಧ; ಮರ್ಡರ್​ ಮಿಸ್ಟ್ರಿಯನ್ನು ಪೊಲೀಸರು ಬಿಡಿಸಿದ್ದೆ ರೋಚಕ | Maharastra

Untitled design - 2024-10-22T212902.321
Published on

ಮುಂಬೈ: ಬಾಲಿವುಡ್​​​​​​ನ ದೃಶ್ಯಂ ಸಿನಿಮಾದಿಂದ ಪ್ರೇರಿತನಾಗಿ ಕೊಲೆ ಮಾಡಿರುವ ಪ್ರಕರಣವೊಂದು ಮಹಾರಾಷ್ಟ್ರ(Maharastra)ದಲ್ಲಿ ಬೆಳಕಿಗೆ ಬಂದಿದೆ. ತನ್ನ ಗೆಳತಿಯನ್ನು ಕೊಂದು ಸಮಾಧಿ ಮಾಡಿದ ನಂತರ ಆಕೆಯ ದೇಹವನ್ನು ಸಿಮೆಂಟ್‌ನಿಂದ ಮುಚ್ಚಿದ ಆರೋಪದ ಮೇಲೆ ಸೇನಾ ಯೋಧನನ್ನು ಬಂಧಿಸಲಾಗಿದೆ.

ಆರೋಪಿ 33 ವರ್ಷದ ಅಜಯ್​​ ವಾಂಖೆಡೆ ಮತ್ತು ಜ್ಯೋತ್ಸ್ನಾ ಆಕ್ರೆ ಮದುವೆಯ ಪೋರ್ಟಲ್ ಮೂಲಕ ಪರಿಚಿತರಾದರು. ಅಜಯ್ ವಾಂಖೆಡೆ ನಾಗಾಲ್ಯಾಂಡ್‌ನ ನಾಗ್ಪುರದ ಕೈಲಾಶ್ ನಗರ ಪ್ರದೇಶದ ನಿವಾಸಿಯಾಗಿದ್ದಾರೆ. ಜ್ಯೋತ್ಸ್ನಾ ಅವರಿಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಪೋರ್ಟಲ್ ಮೂಲಕ ಭೇಟಿಯಾದ ಇವರ ಸ್ನೇಹವು ನಂತರ ಪ್ರೇಮಕ್ಕೆ ತಿರುಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ಅಜಯ್‌ನ ಕುಟುಂಬವು ಇವರಿಬ್ಬರ ಮದುವೆಯನ್ನು ನಿರಾಕರಿಸಿ, ಆತನಿಗೆ ಬೇರೊಬ್ಬ ಮಹಿಳೆಯೊಂದಿಗೆ ಮದುವೆಯನ್ನು ಮಾಡಿದ್ದಾರೆ. ಬಳಿಕ ಇವರಿಬ್ಬರ ನಡುವಿನ ಪರಿಚಯವು ಹದಗೆಟ್ಟಿದೆ. ಅಜಯ್​​ ಮದುವೆಯಾದ ಬಳಿಕ ಜ್ಯೋತ್ಸ್ನಾಳನ್ನು ಕಡೆಗಣಿಸಲು ಪ್ರಾರಂಭಿಸಿದ್ದಾನೆ, ಆಕೆಯಿಂದ ಎದುರಾಗುವ ಸಮಸ್ಯೆಯನ್ನು ದೂರವಾಗಿಲು ಆತ ಕೊಲೆಗೆ ಯೋಜನೆ ರೂಪಿಸಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಅಜಯ್ ಜ್ಯೋತ್ಸ್ನಾಳ ಕರೆಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ ನಂತರ ಆಕೆ ಅವನ ಹುಡುಕಾಟ ಆರಂಭಿಸಿ ಆತನ ಆಪ್ತ ಸ್ನೇಹಿತರೊಬ್ಬರನ್ನು ಭೇಟಿಯಾಗಿದ್ದಾಳೆ. ಬಳಿಕ ಆತ ಅಜಯ್​​ ವಾಂಖೆಡೆ ವಿಳಾಸವನ್ನು ನೀಡಿದ್ದಾನೆ. ಜ್ಯೋತ್ಸ್ನಾನಿನ್ನನ್ನು ಹುಡುಕುತ್ತಿದ್ದಾರೆ ಎಂದು ಅಜಯ್​ಗೆ ಆತನ ಸ್ನೇಹಿತ ತಿಳಿಸಿದ್ದಾನೆ. ಕಳವಳಗೊಂಡ ಅಜಯ್ ತನ್ನ ತಾಯಿಯ ಮೊಬೈಲ್ ಬಳಸಿ ಜ್ಯೋತ್ಸ್ನಾಗೆ ಕರೆ ಮಾಡಿ ಆಗಸ್ಟ್ 28ರಂದು ವಾರ್ಧಾ ರಸ್ತೆಯಲ್ಲಿ ಭೇಟಿಯಾಗಲು ವ್ಯವಸ್ಥೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಜಯ್ ಮತ್ತು ಜ್ಯೋತ್ಸ್ನಾ ಅವರು ವಾರ್ಧಾ ರೋಡ್ ಪ್ರದೇಶದಲ್ಲಿ ಭೇಟಿಯಾಗಿ ಹೋಟೆಲ್​ಗೆ ಹೋಗಿದ್ದಾರೆ. ಬಳಿಕ ಹೋಟೆಲ್​ನಿಂದ ಟೋಲ್ ಪ್ಲಾಜಾಕ್ಕೆ ತಲುಪಿದ್ದಾರೆ. ಅಲ್ಲಿ ಆಕೆಗೆ ನಿದ್ರೆ ಮಾತ್ರೆ ಬೆರೆಸಿರುವ ಡ್ರಿಂಕ್​ ನೀಡಿದ್ದಾನೆ. ಜ್ಯೋತ್ಸ್ನಾ ಪ್ರಜ್ಞೆ ತಪ್ಪಿದ ನಂತರ ಅಜಯ್ ಅವಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ರಾತ್ರಿಯಲ್ಲಿ ಗುಂಡಿ ತೊಡಿ ಆಕೆಯ ದೇಹವನ್ನು ಮುಚ್ಚಿ ಬಳಿಕ ಸಿಮೆಂಟ್​ನಿಂದ ಆ ಪ್ರದೇಶವನ್ನು ಮುಚ್ಚಿದ್ದಾನೆ. ನಂತರ ಆತ ಟ್ರಕ್​ವೊಂದರಲ್ಲಿ ಜ್ಯೋತ್ಸ್ನಾ ಅವರ ಮೊಬೈಲ್ ಫೋನ್ ಅನ್ನು ಎಸೆದಿದ್ದಾರೆ ಎಂದು ಹೇಳಿದರು.

ಜ್ಯೋತ್ಸ್ನಾ ಮನೆಗೆ ಹಿಂತಿರುಗದಿದ್ದಾಗ ಆಕೆಯ ಕುಟುಂಬವು ಆಗಸ್ಟ್ 29ರಂದು ಬೆಲ್ತರೋಡಿ ಪೊಲೀಸ್​ ಠಾಣೆಯಲ್ಲಿ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದಾರೆ. ತನಿಖೆ ಪ್ರಾರಂಭಿಸಿದ ಬಳಿಕ ಸೆಪ್ಟೆಂಬರ್ 17 ರಂದು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ಜ್ಯೋತ್ಸ್ನಾಗಾಗಿ ಹುಡುಕಾಟ ನಡೆಸಿದ್ದಾರೆ.

ಪೊಲೀಸರು ಕರೆ ದಾಖಲೆಗಳ ಮೂಲಕ ಅಜಯ್‌ನನ್ನು ಪತ್ತೆಹಚ್ಚಿ ವಿಚಾರಣೆಗೆ ಕರೆದರು. ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಯತ್ನಗಳ ಹೊರತಾಗಿಯೂ ಅಜಯ್ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ನಂತರ ಅವರು ಸಿಕ್ಕಿಬಿದ್ದರು. ವಿಚಾರಣೆ ವೇಳೆ ಅಜಯ್ ಶವವನ್ನು ಹೂತಿಟ್ಟ ಸ್ಥಳವನ್ನು ಬಹಿರಂಗಪಡಿಸಿದ್ದಾನೆ. ನಾಗ್ಪುರದ ಡೊಂಗರ್‌ಗಾಂವ್ ಟೋಲ್ ಪ್ಲಾಜಾ ಬಳಿ ಸೋಮವಾರ ಪೊಲೀಸರು ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ತೆರಳಿ ದೇಹದ ಭಾಗಗಳನ್ನು ಹೊರತೆಗೆದಿದ್ದಾರೆ ಎಂದು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net