ಮಹಾರಾಷ್ಟ್ರದ ವಸತಿ ಸಚಿವರಿಗೂ ಕರೊನಾ ಸೋಂಕು; ಏ.13ರಿಂದಲೇ ಕ್ವಾರಂಟೈನ್​ನಲ್ಲಿದ್ರು ಜಿತೇಂದ್ರ ಅವದ್

Jitendra 23 aprl
Published on

ಮುಂಬೈ: ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವದ್ ಅವರಿಗೆ ಕರೊನಾ ಸೋಂಕು ತಗುಲಿದೆ. ಕರೊನಾ ಸೋಂಕಿತರ ಸಂಪರ್ಕಕ್ಕೆ ಹೋಗಿದ್ದ ಅವರು ಏ.13ರಿಂದಲೂ ಸೆಲ್ಫ್​ ಕ್ವಾರಂಟೈನ್​ನಲ್ಲಿ ಇದ್ದರು.

ನಿನ್ನೆ ತಪಾಸಣೆ ನಡೆಸಿದಾಗ ಕರೊನಾ ನೆಗೆಟಿವ್ ಎಂದು ವರದಿ ಬಂದಿತ್ತು. ಆದರೂ ಕ್ವಾರಂಟೈನ್​ ಅವಧಿ ಮುಗಿಸುತ್ತೇನೆ ಎಂದಿದ್ದ ಜಿತೇಂದ್ರ ಅವರಿಗೆ ಇಂದು ಸೋಂಕು ದೃಢಪಟ್ಟಿದೆ.

ಸ್ವಲ್ಪ ದಿನಗಳ ಹಿಂದೆ ಜಿತೇಂದ್ರ ಅವರ ಮನೆಯ ಹೌಸ್​ಕೀಪಿಂಗ್​ ಕೆಲಸಗಾರರು, ಐವರು ಭದ್ರತಾ ಸಿಬ್ಬಂದಿಯಲ್ಲಿ ಕರೊನಾ ವೈರಸ್​ ದೃಢಪಟ್ಟಿತ್ತು. ತಮ್ಮ ನೇರ ಸಂಪರ್ಕದಲ್ಲಿದ್ದ ಸುಮಾರು 14 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡ ಬಳಿಕ, ಸಚಿವರೂ ಸೆಲ್ಫ್​ ಕ್ವಾರಂಟೈನ್​ಗೆ ಒಳಗಾಗಿದ್ದರು. ಸದ್ಯ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅನೇಕ ದಿನಗಳಿಂದ ಜಿತೇಂದ್ರ ಅವದ್​ ಅವರು ಯಾರ ಸಂಪರ್ಕಕ್ಕೂ ಹೋಗಿಲ್ಲದ ಕಾರಣ ಉಳಿದ ಅವರ ಸಹದ್ಯೋಗಿಗಳಿಗೆ ಸೋಂಕು ತಗುಲುವ ಅಪಾಯ ಕಡಿಮೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net