ಚಲಿಸುವ ವೇಳೆ ಬಸ್​ನ ಆಕ್ಸಿಲೇಟರ್​ ವೈರ್​ ಕಟ್​; ಸಮಯಪ್ರಜ್ಞೆ ಮೆರೆದ ಚಾಲಕ-ನಿರ್ವಾಹಕಿ

MSRTC
Published on

ಮುಂಬೈ: ಮಹಾರಾಷ್ಟ್ರದಲ್ಲಿ ಪ್ರಯಾಣಿಸುವ ವೇಳೆ ಬಸ್​ನ ಆಕ್ಸಿಲೇಟರ್​ ವೈರ್​ ಕಟ್ಟಾಗಿದ್ದು ಈ ವೇಳೆ ಚಾಲಕ ಹಾಗು ನಿರ್ವಾಹಕಿ ಪರಿಸ್ಥಿತಿಯನ್ನು ನಿಭಾಯಿಸಿರುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಘಟನೆಯೂ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದ್ದು ಕವಠೆ ಮಹಾಂಕಲ್‌ನಿಂದ ಸಾಗುವ ವೇಳೆ ದುರ್ಘಟನೆ ಸಂಭವಿಸಿದೆ.

ನಡೆದಿದ್ದೇನು?

ಕಳೆದ ಗುರುವಾರ ಸಂಜೆ ಬಸ್​ ಚಾಲಕ ಎಂಎ. ಪಾಟೀಲ್​ ಹಾಗು ನಿರ್ವಹಕಿ ವಿಪಿ. ದೇಸಾಯಿ ಕೂಚಿ-ಜಖಾಪುರ್​ ನಡುವೆ 40 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುವ ವೇಳೆ ಬಸ್​ನ ಆಕ್ಸಿಲೇಟರ್​ ವೈರ್ ಕಟ್​ ಆಗಿ ಪ್ಯಾಡ್​ನಿಂದ ಬೇರ್ಪಟ್ಟಿರುವುದನ್ನು ಚಾಲಕ ಗಮನಿಸಿದ್ದಾರೆ.

MSRTC

ಈ ವೇಳೆ ನಿರ್ವಾಹಕಿಯನ್ನು ಕರೆದ ಚಾಲಕ ಗಾಬರಿಯಾಗದಂತೆ ಸೂಚಿಸಿ ಆಕ್ಸಿಲೇಟರ್​ ಕಟ್​ ಆಗಿರುವ ವಿಚಾರವನ್ನು ಹೇಳಿ ಬದಲಿ ಉಪಾಯ ಒಂದನ್ನು ಹೇಳಿದ್ದಾನೆ. ಪೆಡಲ್​ಗೆ ಹಗ್ಗವನ್ನು ಕಟ್ಟಿ ನಿರ್ವಾಹಕಿಗೆ ವೇಗವನ್ನು ಕಾಯ್ದುಕೊಳ್ಳಲು ಸೂಚಿಸಿದ್ಧಾನೆ.

ಚಾಲಕನ ಸೂಚನೆಯಂತೆ ನಿರ್ವಾಹಕಿ ವೇಗವನ್ನು ನಿಯಂತ್ರಿಸಿದ್ದು ಸುಮಾರು 40 ಕಿಲೊಮೀಟರ್​ ದೂರ ಪ್ರಯಾಣಿಕರಿಗೆ ಯಾವುದೇ ರೀತಿ ಆಪತ್ತು ಬಾರದಂತೆ ತಲುಪಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಚಾಲಕ-ನಿರ್ವಾಹಕಿಯ ಶ್ರಮಕ್ಕೆ ನೆಟ್ಟಿಗರು ಬಹುಪರಾಕ್​ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net