ಅತಿ ಹೆಚ್ಚು ಕರೊನಾ ಸೋಂಕಿತರಿರುವ ಮಹಾರಾಷ್ಟ್ರದಿಂದ ನಾಳೆಯಿಂದಲೇ ವಿಮಾನ ಹಾರಾಟವೂ ಪ್ರಾರಂಭ...

Mumbai 24 May 20
Published on

ಮುಂಬೈ: ಈ ಬಾರಿಯ ಲಾಕ್​ಡೌನ್​ನಲ್ಲಿ ರೈಲು, ದೇಶೀಯ ವಿಮಾನ ಸಂಚಾರವನ್ನೂ ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದೆ. ಆಯಾ ರಾಜ್ಯಗಳಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಗಳಿಗೆ ಜವಾಬ್ದಾರಿ ನೀಡಿದೆ.

ಇದೀಗ ಮಹಾರಾಷ್ಟ್ರ ನಾಳೆ (ಮಾ.25)ರಿಂದಲೇ ದೇಶೀಯ ವಿಮಾನಗಳ ಹಾರಾಟ ಪ್ರಾರಂಭಿಸುವ ನಿರ್ಧಾರ ಕೈಗೊಂಡಿದೆ.

ವಿಮಾನ ಸಂಚಾರದ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇವೆ. ಒಂದು ವಿಮಾನದಲ್ಲಿ 25 ಪ್ರಯಾಣಿಕರು ಮಾತ್ರ ಇರುವಂತೆ ನಿಯಮಗಳನ್ನು ರೂಪಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಹೇಳಿತ್ತು.

ಅದರಂತೆಯೇ ಸೋಮವಾರದಿಂದಲೇ ಪ್ರಾರಂಭಿಸುವುದಾಗಿ ನಿರ್ಧಾರ ಪ್ರಕಟ ಮಾಡಿದ್ದು, ಮುಂಬೈನಿಂದ ಟೇಕ್​ ಆಫ್​ ಆಗುವ ಮತ್ತು ಮುಂಬೈ ಏರ್​ಪೋರ್ಟ್​ನಲ್ಲಿ ಲ್ಯಾಂಡ್ ಆಗುವ ದೇಶೀಯ ವಿಮಾನಗಳ ಹಾರಾಟಕ್ಕೆ ಸೂಚನೆ ನೀಡಿದೆ. ಸದ್ಯ ವಿಮಾನಗಳಲ್ಲಿ 25 ಪ್ರಯಾಣಿಕರಿಗೆ ಮಾತ್ರ ಅವಕಾಶ ಇದ್ದು, ಈ ಸಂಖ್ಯೆಯನ್ನು ಕ್ರಮೇಣವಾಗಿ ಜಾಸ್ತಿ ಮಾಡಲಾಗುವುದು ಎಂದು ತಿಳಿಸಿದೆ.

ಜೈಪುರದಿಂದ ಹೊರಡಲಿರುವ ಮೊದಲ ಇಂಡಿಗೋ ಏರ್​ಲೈನ್ ವಿಮಾನ ನಾಳೆ ಮುಂಜಾನೆ 6ಗಂಟೆಗೆ ಮುಂಬೈ ಏರ್​ಪೋರ್ಟ್​ನಲ್ಲಿ ಲ್ಯಾಂಡ್​ ಆಗಲಿದೆ.

ವಿಮಾನ ಹಾರಾಟಕ್ಕೆ ಸಂಬಂಧಪಟ್ಟಂತೆ ಹೊಸ ಗೈಡ್​ಲೈನ್​ನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಸಚಿವ ನವಾಬ್​ ಮಲಿಕ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net