ಮಹಾಲಕ್ಷ್ಮೀ ಹತ್ಯೆ ಪ್ರಕರಣ: 30 ತುಂಡಗಳಲ್ಲ 50

Vector illustration in HD very easy to make edits.
Published on

ಬೆಂಗಳೂರು: ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಕರ್ ಕೊಲೆ ಪ್ರಕರಣದಲ್ಲಿ ಆಕೆಯ ಪ್ರಿಯಕರ ೩೫ ತುಂಡುಗಳನ್ನಾಗಿ ಮಾಡಿ ಹತ್ಯೆಗೈದಿದ್ದ. ಆದರೆ, ಬೆಂಗಳೂರಿನ ವೈಯ್ಯಲಿಕಾವಲ್‌ನಲ್ಲಿ ನಡೆದಿರುವ ಮಹಾಲಕ್ಷ್ಮೀ ಹತ್ಯೆ ಪ್ರಕರಣದಲ್ಲಿ ೩೦ ಅಲ್ಲ, ೫೦ ಕ್ಕೂ ಹೆಚ್ಚು ತಂಡು ತುಂಡು ಮಾಡಿ ಭೀಕರವಾಗಿ ಹತ್ಯೆಗೈದಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೇ ಭೀಕರ ಹತ್ಯೆಗೈದ ಆರೋಪಿಯು ಕೃತ್ಯ ಎಸಗಿದ ಬಳಿಕ ಶವ ಸಾಗಟಕ್ಕೂ ಮುಂದಾಗಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ದೇಹದ ತುಂಡುಗಳನ್ನು ಇರಿಸಿದ್ದ ಫ್ರೀಜ್ ಬಳಿ ಖಾಲಿ ಸೂಟ್‌ಕೇಸ್ ಪತ್ತೆಯಾಗಿದ್ದು, ಅದರಲ್ಲಿ ದೇಹದ ತುಂಡುಗಳನ್ನು ಇರಿಸಿ ಬೇರೆ ಕೊಂಡೊಯ್ಯಲು ಸಂಚು ರೂಪಿಸಿರುವ ಸಾಧ್ಯತೆಯಿದೆ. ಆದರೆ, ಸಾಧ್ಯವಾಗಿಲ್ಲ. ಕೂಡಲೇ ತಪ್ಪಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಅರಿತು, ಕೂಡಲೇ ಫ್ರೀಜ್‌ನಲ್ಲಿ ದೇಹದ ತುಂಡುಗಳನ್ನು ಇಟ್ಟು ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆತ್ಮೀಯ ಸ್ನೇಹಿತನಿಂದ ಹತ್ಯೆ?
ಮಹಾಲಕ್ಷ್ಮೀ ಆತ್ಮೀಯ ಸ್ನೇಹಿತನೇ ಕೊಂದು ಪರಾರಿಯಾಗಿದ್ದಾನೆ ಎಂಬ ಶಂಕೆ ಬಲವಾಗಿದೆ. ಅದಕ್ಕೆ ಪೂರಕವೆಂಬಂತೆ ಆತನ ಮೊಬೈಲ್ ನಂಬರ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಅನೈತಿಕ ಸಂಬಂಧಕ್ಕೆ ಮಹಾಲಕ್ಷ್ಮೀ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಮತ್ತೊಂದೆಡೆ ಮೃತ ಮಹಿಳೆ ಪತಿ ಹೇಮಂತ್ ದಾಸ್, ನೆಲಮಂಗಲ ನಿವಾಸಿ ಅಶ್ರಫ್ ಎಂಬಾತನ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
ವೈಯ್ಯಲಿಕಾವಲ್‌ನ ವಿನಾಯಕನಗರದಲ್ಲಿ ಮಹಾಲಕ್ಷ್ಮೀ ಎಂಬಾಕೆಯನ್ನು ೧೦ ದಿನಗಳ ಹಿಂದೆ ಕೊಂದು ಸುಮಾರು ೫೦ ತುಂಡುಗಳನ್ನಾಗಿ ಮಾಡಿ, ಫ್ರೀಜ್‌ನಲ್ಲಿ ಇರಿಸಲಾಗಿತ್ತು. ಆಕೆಯ ತಾಯಿ ಮತ್ತು ಸಹೋದರಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು.

ನಾಲ್ವರ ಮೇಲೆ ಅನುಮಾನ
ಮಹಾಲಕ್ಷ್ಮಿ ಬರ್ಬರ ಹತ್ಯೆ ರಹಸ್ಯ ಇನ್ನು ನಿಗೂಢವಾಗಿಯೇ ಉಳಿದಿದೆ. ಈ ಘಟನೆಯ ಸಂಬಂಧ ವೈಯ್ಯಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ. ಮೃತ ತಾಯಿ ಸೀಮಾ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಾಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net