

ಬೆಂಗಳೂರು: ಕಿರುತೆರೆ ನಟಿ ವಿ.ಜೆ. ಮಹಾಲಕ್ಷ್ಮೀ ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ವಿವಾಹವಾಗುವ ಮೂಲಕವಾಗಿ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿದೆ. ಕೆಲವು ದಿನಗಳ ಹಿಂದೆ ನಟಿ ಮಹಾಲಕ್ಷ್ಮಿ ಪತಿ ರವೀಂದ್ರ ಅನಾರೋಗ್ಯದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇತ್ತ ಮಹಾಲಕ್ಷ್ಮೀ ಭರ್ಜರಿಯಾಗಿ ಸಂಕ್ರಾಂತಿ ಸಲೆಬ್ರೆಟ್ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ಉಸಿರಾಡಲು ರವೀಂದರ್ ಅವರಿಗೆ ಕಷ್ಟವಾಗುತ್ತಿದ್ದು, ಕಳೆದ ಒಂದು ವಾರದಿಂದ ಐಸಿಯುನಲ್ಲಿ ಕಳೆದಿದ್ದಾರೆ. ಉಸಿರಾಡಲು ತುಂಬಾ ಕಷ್ಟಪಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆಕ್ಸಿಜನ್ ಮಾಸ್ಕ್ ಹಾಕಿಕೊಂಡೆ ಮಾತನಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಏನಾಯಿತು ರವಿಂದರ್ಗೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ದಡೂತಿ ದೇಹದಿಂದಾಗಿ ರವೀಂದರ್ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿಯನ್ನು ಕಂಡು ಮಹಾಲಕ್ಷ್ಮೀ ಚಿಂತೆಗೆ ಜಾರಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋಗಳು ತಲೆಕೆಳಗೆ ಮಾಡಿದೆ.
ಮಹಾಲಕ್ಷ್ಮಿ ಅವರು "ನಿಮ್ಮ ಪೊಂಗಲ್ ಸಂತೋಷ, ಸಮೃದ್ಧಿ ಮತ್ತು ಪ್ರೀತಿಯ ಕ್ಷಣಗಳ ಉಷ್ಣತೆಯಿಂದ ತುಂಬಲಿ, ಎಲ್ಲರಿಗೂ ಪೊಂಗಲ್ ಶುಭಾಶಯಗಳು" ಎಂಬ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮಹಾಲಕ್ಷ್ಮಿಯೂ ಪೊಂಗಲ್ ಪೂಜೆ ಸಲ್ಲಿಸಿದ್ದು ಕಂಡುಬರುತ್ತದೆ. ಮಹಾಲಕ್ಷ್ಮಿ ಅವರು ಪೊಂಗಲ್ ಸಂಭ್ರಮಿಸಲು ವಧುವಿನ ಕೊರ್ವೈ ರೇಶ್ಮಿ ಸಿಲ್ಕ್ ಸೀರೆಯನ್ನು ಧರಿಸಿದ್ದಾರೆ. ಈ ವೇಳೆ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ಒಂದೆಡೆ ಮಹಾಲಕ್ಷ್ಮಿಯ ಸೀರೆಯು ಗಮನ ಸೆಳೆದರೆ, ಮತ್ತೊಂದೆಡೆ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಇಷ್ಟೆಲ್ಲಾ ಉಟ್ಟು ಟ್ರೋಲ್‌ಗೆ ಒಳಗಾಗಿದ್ದರು. ಮಹಾಲಕ್ಷ್ಮಿ ಅವರ ಪೋಸ್ಟ್‌ನಿಂದ, ರವೀಂದ್ರ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ. ರವೀಂದ್ರ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆಯೇ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.