ಮಹದೇಶ್ವರ ಸ್ವಾಮಿ ಆರಾಧನಾ ಮಹೋತ್ಸವ

01BTP02
ಬೆಕ್ಕರೆ ಗ್ರಾಮದ ಹೊರವಲಯದ ತೋಟದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ಆರಾಧನಾ ಮಹೋತ್ಸವ ಅಂಗವಾಗಿ ಅನ್ನಸಂತರ್ಪಣೆ ನಡೆಯಿತು.
Published on

ಬೆಟ್ಟದಪುರ: ಬೆಟ್ಟದಪುರ ಸಮೀಪದ ಬೆಕ್ಕರೆ ಗ್ರಾಮದ ಹೊರವಲಯದ ತೋಟದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ಆರಾಧನಾ ಮಹೋತ್ಸವ ಇತ್ತೀಚೆಗೆ ಸಂಭ್ರಮದಿಂದ ಜರುಗಿತು.

ಬೆಕ್ಕರೆ ಗ್ರಾಮದ ಹೊರವಲಯದ ತೋಟದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ಆರಾಧನಾ ಮಹೋತ್ಸವ ಅಂಗವಾಗಿ ಅನ್ನಸಂತರ್ಪಣೆ ನಡೆಯಿತು.
ಬೆಕ್ಕರೆ ಗ್ರಾಮದ ಹೊರವಲಯದ ತೋಟದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ಆರಾಧನಾ ಮಹೋತ್ಸವ ಅಂಗವಾಗಿ ಅನ್ನಸಂತರ್ಪಣೆ ನಡೆಯಿತು.

ಪ್ರತಿ ವರ್ಷ ಶಿವರಾತ್ರಿ ಹಬ್ಬದ ಮಾರನೇ ದಿನ ತೋಟದಲ್ಲಿ ಊಟ ಎಂದು ಪ್ರಸಿದ್ಧಿ ಪಡೆದಿರುವ ಮಹದೇಶ್ವರ ಸ್ವಾಮಿ ಆರಾಧನಾ ಮಹೋತ್ಸವ ಗ್ರಾಮದ ರಾಜೇಶ್ವರಿ ಮಲ್ಲಿಕಾರ್ಜುನರಾಧ್ಯ ಕುಟುಂಬದವರ ನೇತೃತ್ವದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಗ್ರಾಮಸ್ಥರು ಅನ್ನದಾಸೋಹಕ್ಕೆ ನೀಡಿದ ಅಗತ್ಯ ದಿನಸಿ ತರಕಾರಿ ಹಾಗೂ ಇತರ ಪದಾರ್ಥಗಳನ್ನು ಮನೆಗಳ ಬಳಿ ಸಂಗ್ರಹಿಸಿ ಅಡುಗೆ ತಯಾರಿಸಿ ಅನ್ನ ಸಂತರ್ಪಣೆ ಮಾಡುವುದು ಇಲ್ಲಿನ ವಿಶೇಷ. ಗ್ರಾಮದ ಹೊರವಲಯದ ತೋಟದಲ್ಲಿ ಪುರೋಹಿತರಾದ ಮನೋಜ್ ಆರಾಧ್ಯ ನೇತೃತ್ವದಲ್ಲಿ ಪ್ರಥಮವಾಗಿ ಗಂಗಾ ಸ್ಥಾನದಿಂದ ಕಳಸ ತಂದು ಹಸಿರು ಚಪ್ಪರ ಮಧ್ಯೆ ಮಹದೇಶ್ವರ ಸ್ವಾಮಿ ಭಾವಚಿತ್ರ ಹಾಗೂ ಕಳಸ ಪ್ರತಿಷ್ಠಾಪಿಸಿ ಪೂಜಿಸಿದ ಬಳಿಕ ಮಹಾ ಮಂಗಳಾರತಿ ನೆರವೇರಿಸಿ ಅನ್ನ ಸಂತರ್ಪಣೆ ನಡೆಸಲಾಯಿತು.

ಬೆಕ್ಕರೆ ಸೇರಿದಂತೆ ಕೊಣಸೂರು, ಭುವನಹಳ್ಳಿ ಹಾಗೂ ಸ್ಥಳೀಯರು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಸಂಜೆ ಮಹದೇಶ್ವರ ಸ್ವಾಮಿ ಕಳಸ ಹಾಗೂ ಭಾವಚಿತ್ರವನ್ನು ಗ್ರಾಮದ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net