ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕುಂಭಮೇಳ ವೈರಲ್ ಬ್ಯೂಟಿ ಮೊನಾಲಿಸಾ! Monalisa

monalisa
Published on
Monalisa:  ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ವಿಡಿಯೋ ಮೂಲಕ ಖ್ಯಾತಿ ಗಳಿಸಿದ ಮೊನಾಲಿಸಾ ಭೋಂಸ್ಲೆ ಈಗ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದೆ.

'ನಾಗಮ್ಮ' ಎಂಬ ಶೀರ್ಷಿಕೆಯ ಚಿತ್ರದ ಪೂಜೆ ಪೂರ್ಣಗೊಂಡಿದ್ದು, ಪಿ. ಬಿನು ವರ್ಗೀಸ್ ನಿರ್ದೇಶನದ ಈ ಚಿತ್ರದಲ್ಲಿ ಕೈಲಾಶ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಪೂಜಾ ಸಮಾರಂಭದ ವೀಡಿಯೊವನ್ನು ಮೊನಾಲಿಸಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ . ಈ ಕಾರ್ಯಕ್ರಮ ಕೊಚ್ಚಿಯಲ್ಲಿ ನಡೆದಿದ್ದು, ಹಿರಿಯ ಚಲನಚಿತ್ರ ನಿರ್ಮಾಪಕ ಸಿಬಿ ಮಲಯಿಲ್ ಭಾಗವಹಿಸಿದ್ದರು. ಕ್ಲಿಪ್‌ನಲ್ಲಿ, ಮೊನಾಲಿಸಾ ಕೈಲಾಶ್ ಅವರೊಂದಿಗೆ ವೇದಿಕೆಯ ಮೇಲೆ ನಿಂತಿರುವುದು ಕಂಡುಬಂದಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ.

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ 16 ವರ್ಷದ ಮೊನಾಲಿಸಾ, ಪ್ರಯಾಗ್‌ರಾಜ್ ಮಹಾಕುಂಭ ಮೇಳದಲ್ಲಿ ವೈರಲ್​ ಆಗಿರುವ ವೀಡಿಯೋ ಮೂಲಕವಾಗಿ ಪರಿಚಿತರಾದರು. ನಂತರ ಈ ಖ್ಯಾತಿಯೊಂದಿಗೆ ಮೊನಾಲಿಸಾ ಹಿಂದಿ ಚಿತ್ರ 'ದಿ ಡೈರಿ ಆಫ್ ಮಣಿಪುರ'ದಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ ಮಲಯಾಳಂ ಚಿತ್ರರಂಗಕ್ಕೂ ಮೋನಾಲಿಸಾ ಎಂಟ್ರಿ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net