15 ದಿನಗಳಿಂದ ಮಾಗಡಿ ತಹಸೀಲ್ದಾರ್​ ನಾಪತ್ತೆ!

srinivas prasad magadi kas
Published on

ರಾಮನಗರ: ಮಾಗಡಿ ತಹಸೀಲ್ದಾರ್ ಶ್ರೀನಿವಾಸ್ ಪ್ರಸಾದ್ ನಾಪತ್ತೆಯಾಗಿದ್ದಾರೆ. ಪ್ರಕರಣವೊಂದರಲ್ಲಿ ಎ2 ಆರೋಪಿಯಾಗಿರುವ ತಹಸೀಲ್ದಾರ್​, 15 ದಿನಗಳಿಂದ ಕೆಲಸಕ್ಕೂ ಬಂದಿಲ್ಲ. ಇವರ ಮೊಬೈಲ್ ಫೋನ್ ಸ್ವಿಚ್ಡ್​ ಆಫ್​ ಆಗಿದೆ!

ಜ.3ರಂದು ಮಾಗಡಿ ತಾಲೂಕು ಕಚೇರಿ ಬಳಿ ಏಜೆಂಟ್ ಮಂಜುನಾಥ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಜಮೀನು ವಿಚಾರದಲ್ಲಿ ಸಾರ್ವಜನಿಕರೊಬ್ಬರಿಂದ 60 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ ಏಜೆಂಟ್‌, ಮುಂಗಡವಾಗಿ 20 ಸಾವಿರ ಹಣ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದ.

ಬಂಧಿತ ಏಜೆಂಟ್ ಮಂಜುನಾಥ್​, ತಹಸೀಲ್ದಾರ್ ಶ್ರೀನಿವಾಸ್ ಪ್ರಸಾದ್​ ಅವರ ಆಪ್ತ. ಮಂಜುನಾಥ್ ಹಾಗೂ ತಹಸೀಲ್ದಾರ್ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ವಿಚಾರಣೆಗೂ ಬಾರದೇ, ಕೆಲಸಕ್ಕೂ ಬಾರದೇ 15 ದಿನಗಳಿಂದ ತಹಸೀಲ್ದಾರ್ ನಾಪತ್ತೆಯಾಗಿದ್ದಾರೆ. ಇವರಿಗೆ ರಜೆ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಕೂಡ ಸ್ಪಷ್ಟ ಪಡಿಸಿದ್ದಾರೆ.

ಇದೇ ತಹಸೀಲ್ದಾರ್ ವರ್ಗಾವಣೆ ವಿಚಾರದಲ್ಲಿ ಸಚಿವರಾದ ಆರ್.ಅಶೋಕ್ ಹಾಗೂ ಅಶ್ವಥ್ ನಾರಾಯಣ್ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net