ಗುಣಮಟ್ಟ,ರುಚಿ, ಶುಚಿಗೆ ಹೆಸರಾದ ‘ ಮಧುರೈ ಬನ್ ಪರೋಟಾ ಹಟ್’ ಮಹದೇವಪುರದಲ್ಲಿ ಆರಂಭ: ಮಾಜಿ ಸಚಿವ ಅರವಿಂದ ಲಿಂಬಾವಳಿ ಉದ್ಘಾಟನೆ.

New Project (5)
Published on

ಬೆಂಗಳೂರು: ಮಹದೇವಪುರ ಕ್ಷೇತ್ರದ ಅಯ್ಯಪ್ಪ ನಗರ ಮುಖ್ಯರಸ್ತೆಯಲ್ಲಿರುವ ದಿ ಟರ್ಮಿನಲ್ ಮಾಲ್ನಲ್ಲಿ ನೂತನವಾಗಿ ಆರಂಭಿಸಿರುವ ’ಮಧುರೈ ಬನ್ ಪರೋಟಾ ಹಟ್’ ಹೋಟೆಲ್ನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.

ಮಧುರೈ ಬನ್ ಪರೋಟಾ ಹಟ್ ಹೋಟೆಲ್ ನಮ್ಮ ಕ್ಷೇತ್ರದಲ್ಲಿ ತೆರೆದಿರುವುದು ಖುಷಿಯ ವಿಚಾರವಾಗಿದೆ. ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳಲ್ಲಿನ ಗುಣಮಟ್ಟ ಹಾಗೂ ರುಚಿಯ ಜತೆಗೆ ಗ್ರಾಹಕರಿಗೆ ಉತ್ತಮ ಪರಿಶುದ್ದ ಆಹಾರ ನೀಡುವುದು ಹೋಟೆಲ್‌ಗಳ ಜವಾಬ್ದಾರಿ.ಈ ನಿಟ್ಟಿನಲ್ಲಿ ಮಧುರೈ ಹೋಟೆಲ್ ಗ್ರಾಹಕರಿಗೆ ಉತ್ತಮ ಆಹಾರ ನೀಡುವರೆಂಬ ನಂಬಿಕೆ ಇದೆ. ರುಚಿ ಮತ್ತು ಶುಚಿತ್ವದಿಂದ ಗ್ರಾಹಕರ ಮೆಚ್ಚುಗೆ ಪಡೆದು ಹೋಟೆಲ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಹೋಟೆಲ್ ಮಾಲಿಕ ಸ್ಟೀನ್ ಮಾತನಾಡಿ ನಮ್ಮಲ್ಲಿ ಖಾದ್ಯಗಳನ್ನು ತಯಾರಿಸುವ ಬಾಣಸಿಗರಿಗೆ ಹಲವಾರು ವರ್ಷಗಳ ಅನುಭವವಿದೆ.ಸಸ್ಯಹಾರಕ್ಕೆ ಪ್ರತ್ಯೇಕ ಮತ್ತು ಮಾಂಸಹಾರಕ್ಕೆ ಪ್ರತ್ಯೇಕ ಬಾಣಸಿಗರನ್ನು ಹೊಂದಿದ್ದೇವೆ. ಅದರಲ್ಲು ಸೌತ್, ನಾರ್ಥ್,ಆಂಧ್ರ ಸೇರಿ ಹಲವು ರಾಜ್ಯಗಳ ಮಾದರಿಯ ಖಾದ್ಯಗಳು ದೊರಯಲಿದ್ದು, ಎಲ್ಲ ರೀತಿಯ ಗ್ರಾಹಕರು ನಮ್ಮಲ್ಲಿನ ಖಾದ್ಯಗಳನ್ನು ಸವಿಯಬಹುದಾಗಿದೆ. ಪ್ರಮುಖವಾಗಿ ಗುಣಮಟ್ಟ,ಶುಚಿತ್ವ, ಮತ್ತು ರುಚಿಗೆ ಆದ್ಯತೆ ನೀಡಿದ್ದೇವೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಎಚ್.ಎಸ್ ಪಿಳ್ಳಪ್ಪ, ಅಶ್ವತ್ಥನಗರ ಮಂಜುನಾಥ ರಾಜು, ಹೋಟೆಲ್ ನ ಮಾಲೀಕರಾದ ಸ್ಟೀಫನ್ ಸಿಬ್ಬಂದಿವರ್ಗ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net