ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಮದರಸಾ ಶಿಕ್ಷಕನಿಗೆ 187 ವರ್ಷ ಜೈಲು ಶಿಕ್ಷೆ!

dk - 2025-04-09T220436.665
Published on

ಕೋವಿಡ್​ ಸಾಂಕ್ರಮಿಕ ಸಮಯದಲ್ಲಿ 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಮದರಸಾ ಶಿಕ್ಷಕನಿಗೆ 187 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ದೋಷಿ ಇಲ್ಲಿನ ಅಳಕೋಡ್ ಮೂಲದ ಮುಹಮ್ಮದ್ ರಫಿಗೆ 9 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ತಳಿಪರಂಬ ನ್ಯಾಯಾಲಯವು ಮಂಗಳವಾರ ಈ ತೀರ್ಪು ನೀಡಿದೆ.

ಪ್ರಕರಣ ಏನು..?

2020 ಮತ್ತು 21ರ ಸಮಯದ ನಡುವೆ ಈ ಕೃತ್ಯ ನಡೆದಿದೆ. ರಫಿ ಬಾಲಕಿಗೆ ವಿವಿಧ ರೀತಿಯ ಗಿಫ್ಟ್​ ಕೊಟ್ಟು ಆಕೆಯ ವಿಶ್ವಾಸಗಳಿಸಿದ್ದಾನೆ. ಬಳಿಕ ಪದೇಪದೆ ಬಾಲಕಿ ಮೇಲೆ ಲೈಂಗಿಕ ಕೃತ್ಯ ಎಸಗಿದ್ದಾನೆ. ಈ ಸಂಬಂಧ ಪಳಯಂಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಫಿ ಪದೇ ಪದೇ ಅಪರಾಧಿ ಎಂದು ನ್ಯಾಯಾಲಯ ಗಮನಿಸಿದೆ. ವಲಪಟ್ಟಣಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಇನ್ನೊಂದು ಪ್ರಕರಣದಲ್ಲಿ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಹೊಸ ಅಪರಾಧ ಎಸಗಿದಾಗ ಜಾಮೀನಿನ ಮೇಲೆ ಹೊರಬಂದಿದ್ದ. ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಣಿಸಿದ್ದು, ರಫಿಗೆ 187 ವರ್ಷ ಶಿಕ್ಷೆ ವಿಧಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net