VIDEO | ಭಾರೀ ಮಳೆಗೆ ಮುಳುಗಿದ ಪಶುಪತಿನಾಥ ದೇವಾಲಯ!; ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

Untitled design - 2023-09-17T113033.109
Published on

ಮಧ್ಯಪ್ರದೇಶ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನಗರದ ಪಶುಪತಿನಾಥ ದೇವಾಲಯದ ಗರ್ಭಗುಡಿ ಅರ್ಧ ಮುಳಗಡೆಯಾಗಿದ್ದು, ಘಟನೆಯು ಮಧ್ಯಪ್ರದೇಶದ ಮಂದಸೌರ್​ನಲ್ಲಿ ವರದಿಯಾಗಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಶಿವನ ನದಿ ಉಕ್ಕಿ ಹರಿಯುತ್ತಿದ್ದು, ಇದರ ಪರಿಣಾಮ ಪ್ರಥಮ ಬಾರಿಗೆ ಅಷ್ಟಮುಖಿ ಪಶುಪತಿನಾಥ ಮಹಾದೇವ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾದ ಎಂಟು ಮುಖಗಳ ಭಗವಾನ್ ಪಶುಪತಿನಾಥ ವಿಗ್ರಹ ಮತ್ತು ದೇವಾಲಯದ ಶಿವಲಿಂಗವೂ ಮುಳುಗಡೆಗೆ ತುತ್ತಾಗಿದೆ.

ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಮಂದಸೌರ್‌ನಲ್ಲಿ ಸುಮಾರು 5 ಇಂಚುಗಳಷ್ಟು ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಅಶೋಕ್ ನಗರ, ಶನಿ ವಿಹಾರ್, ಖಾನ್ಪುರ ಸೇರಿದಂತೆ ಮಂದಸೌರ್ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಭಾರೀ ಮಳೆಯ ಹಿನ್ನೆಲೆ ಮಿಡ್ ಇಂಡಿಯಾ, ಸುವಾಸ್ರಾ ರೈಲ್ವೇ ಮತ್ತು ಪಚ್‌ಪಹಾರ್ ಅಂಡರ್‌ಪಾಸ್‌ನ ಸಂಚಾರವನ್ನು ಸಹ ನಿರ್ಬಂಧಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net