

ನೀಮುಚ್ (ಮಧ್ಯಪ್ರದೇಶ): ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತ ಹೊಂದಿರುವ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಜಿರಾನ್ ಗ್ರಾಮದ ಯೋಧನಿಗೆ ತವರಿನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ.
ನಾಯಕ್ ವಿಜಯ್ ಬಿ ಸಿಂಗ್ ಬುಧವಾರ ತವರಿಗೆ ಆಗಮಿಸಿದರು. ಮೊದಲೇ ಅದ್ಧೂರಿ ಸ್ವಾಗತಕ್ಕೆ ಗ್ರಾಮಸ್ಥರು ಭಾರಿ ಸಿದ್ಧತೆ ಮಾಡಿಕೊಂಡಿದ್ದರು. ಯೋಧ ಮನೆಗೆ ಬರುತ್ತಿದ್ದಂತೆ ಆತನ ಕಾಲುಗಳು ನೆಲಕ್ಕೆ ತಾಗದಂತೆ ಗ್ರಾಮಸ್ಥರು ತಮ್ಮ ಅಂಗೈಯನ್ನು ನೆಲಕ್ಕೆ ಊರಿ ಅದರ ಮೇಲೆ ನಡೆಸುವ ಮೂಲಕ ಗೌರವಪೂರ್ಣ ಭವ್ಯ ಸ್ವಾಗತ ಕೋರಿದರು.
ಈ ಬಗ್ಗೆ ಮಾತನಾಡಿರುವ ಯೋಧ ನಾಯಕ್ ವಿಜಯ್, ನಿಜಕ್ಕೂ ನನಗಿದು ಹೆಮ್ಮೆಯ ಸಂಗತಿ. ಭಾರತೀಯ ಸೇನೆಯಲ್ಲಿ 17 ವರ್ಷ 26 ದಿನ ಸೇವೆ ಸಲ್ಲಿಸಿ, ನಾನಿಂದು ನಿವೃತ್ತಿ ಹೊಂದಿದ್ದೇನೆ. ನಾನು ತವರಿಗೆ ಬಂದಾಗಲೆಲ್ಲ ನನ್ನ ಪಾದ ನೆಲವೂರಲು ಬಿಡುವುದಿಲ್ಲ. ನನ್ನ ದೇವಸ್ಥಾನಕ್ಕೆ ಹೊತ್ತೊಯ್ದು ಆಶೀರ್ವದಿಸುತ್ತಾರೆ. ನಿಜಕ್ಕೂ ನನಗೆ ಹೆಮ್ಮೆ ಇದೆ ಎನ್ನುತ್ತಾರೆ ವಿಜಯ್. (ಏಜೆನ್ಸೀಸ್)