

ಮಧ್ಯಪ್ರದೇಶ: ವರದಕ್ಷಿಣೆಗಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹಗ್ಗದಿಂದ ಕಟ್ಟಿ ಬಾವಿಗೆ ಎಸೆದು ಕೊಲೆ ಮಾಡಿದ್ದಾನೆ. ಮಧ್ಯಪ್ರದೇಶದ ನೀಮುಚ್ನಲ್ಲಿ ಈ ಘಟನೆ ನಡೆದಿದೆ.
ಉಷಾ ಮೃತ ಮಹಿಳೆ. ರಾಕೇಶ್ ಕಿರ್ ಕೊಲೆ ಆರೋಪಿ. ಪತ್ನಿಯನ್ನು ಕೊಂದಿರುವ ದುಷ್ಕೃತ್ಯದ ವಿಡಿಯೋ ತೆಗೆದು ಆಕೆಯ ಸಂಬಂಧಿಕರಿಗೆ ಕಳುಹಿಸಿದ್ದಾನೆ. ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಪತಿ ಬರ್ಬರವಾಗಿ ಕೊಂದಿದ್ದಾನೆ.
ರಾಕೇಶ್ ಕಿರ್ ಎಂಬ ವ್ಯಕ್ತಿ ತನ್ನ ಪತ್ನಿ ಉಷಾಳನ್ನು ಹಗ್ಗದಿಂದ ಕಟ್ಟಿ ಬಾವಿಗೆ ಎಸೆದಿದ್ದಾನೆ. ಆಕೆ ಮುಳುಗುವವರೆಗೂ ಸಂಪೂರ್ಣ ವಿಡಿಯೋ ತೆಗೆದು ಪತ್ನಿಯ ಸಂಬಂಧಿಕರಿಗೆ ಕಳುಹಿಸಿದ್ದಾನೆ. ಈ ವಿಡಿಯೋ ನೋಡಿ ಗ್ರಾಮದ ಕೆಲವರಿಗೆ ಕರೆ ಮಾಡಿ ಮಗಳನ್ನು ರಕ್ಷಿಸುವಂತೆ ಮನವಿ ಮಾಡಿದರು. ಉಷಾ ಆಗಲೇ ಮೃತಪಟ್ಟಿದ್ದಾಳೆ.
ಉಷಾ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ರಾಕೇಶ್‌ನನ್ನು ಬಂಧಿಸಿದ್ದಾರೆ. 5 ಲಕ್ಷ ರೂ. ವರದಕ್ಷಿಣೆಗಾಗಿ ರಾಕೇಶ್ ಉಷಾಳನ್ನು ಕೊಂದಿದ್ದಾನಂತೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.