‘ವಿಶ್ವ ಸುಂದರಿ’ ಬೆಂಬಲಕ್ಕೆ ಮಾಧುರಿ : ಐಶ್ವರ್ಯಾ ರೈ ಟ್ರೋಲ್ ಮಾಡಿದವರ ವಿರುದ್ಧ ಅಸಮಾಧಾನ ಹೊರಹಾಕಿದ ನಟಿ

ಮಾಧುರಿ ದೀಕ್ಷಿತ್, ಐಶ್ವರ್ಯಾ ರೈ
ಮಾಧುರಿ ದೀಕ್ಷಿತ್, ಐಶ್ವರ್ಯಾ ರೈ
Published on

ಪ್ರಮುಖ ಮುಖ್ಯಾಂಶಗಳು

  • ಐಶ್ವರ್ಯಾ ರೈ ಕಾನ್ಸ್ ಫೆಸ್ಟಿವಲ್​ ಫೋಟೋ ವೈರಲ್​
  • ಕೆಟ್ಟದಾಗಿ ಕಮೆಂಟ್ ಮಾಡಿದ ಕಿಡಿಗೇಡಿಗಳು
  • ಐಶ್​ ಬೆಂಬಲಕ್ಕೆ ನಿಂತ ಮಾಧುರಿ ದೀಕ್ಷಿತ್​
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ಟ್ರೋಲ್‌ಗೆ ಗುರಿಯಾಗಿದ್ದರು. ಕಳೆದ ತಿಂಗಳ 12ರಿಂದ 23ರವರೆಗೆ ನಡೆದ ಪ್ರತಿಷ್ಠಿತ ಕಾನ್ ಚಲನಚಿತ್ರ್ಯೋತ್ಸವದ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದ ನಟಿಯ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಆದರೆ, ಕೆಲ ಕಿಡಿಗೇಡಿಗಳು ನಟಿಯ ವಯಸ್ಸು ಮತ್ತು ದೇಹದ ಕುರಿತಂತೆ ಅಸಭ್ಯವಾಗಿ ಕಂಟೆಂಟ್ ಎಡಿಟ್ ಮಾಡಿ ಶೇರ್ ಮಾಡಿದ್ದಾರೆ. ಈ ರೀತಿಯ ದುರ್ವರ್ತನೆ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವಸುಂದರಿ ಐಶ್ವರ್ಯಾ ರೈರನ್ನು ಟ್ರೋಲ್ ಮಾಡಿದವರ ವಿರುದ್ಧ ನಟಿ ಮಾಧುರಿ ದೀಕ್ಷಿತ್ ಗರಂ ಆಗಿದ್ದಾರೆ. ‘ಕಳೆದ 20 ವರ್ಷಗಳಿಂದ ಐಶ್ವರ್ಯಾ ರೈ ಕಾನ್ ಫಿಲಂ ಫೆಸ್ಟಿವಲ್‌ಗೆ ಹೋಗುತ್ತಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಅವರು ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಚಾರ. ಅವರು ಜಾಗತಿಕ ಮನ್ನಣೆ ಪಡೆದ ತಾರೆ. ಈಗಾಗಲೇ ಮಿಸ್ ವರ್ಲ್ಡ್ ಆಗಿ, ದೇಶಕ್ಕೆ ಹೆಸರು ತಂದುಕೊಟ್ಟಿದ್ದಾರೆ. ಇನ್ನು ನೀವು ಅವರ ವಯಸ್ಸನ್ನು ಇಳಿಸಲು ಸಾಧ್ಯವಿಲ್ಲ. ದೇಹದ ತೂಕ, ಡ್ರೆಸ್ ಸೈಜ್ ಕಡಿಮೆ ಮಾಡಲು ಸಾಧ್ಯವೇ ಆದರೂ ಐಶ್ವರ್ಯಾ ರೈ ತುಂಬಾ ಸುಂದರವಾಗಿ ಕಾಣುತ್ತಾರೆ. ಮುಖ್ಯವಾಗಿ ಅವರು ಆಂತರ್ಯದಲ್ಲಿಯೂ ಸೌಂದರ್ಯವಾಗಿದ್ದಾರೆ. ಇಂತಹ ಅವಹೇಳನಕಾರಿ ಕಂಟೆಂಟ್ ಹಂಚಿಕೊಳ್ಳುವ ಮೂಲಕ ಇಂದಿನ ಯುವ ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೀರಿ?. ಯಾವತ್ತಿಗೂ ನೋಟಕ್ಕಿಂತ ಅವರ ಸಾಧನೆ ಮುಖ್ಯ’ ಎಂದು ಐಶ್ವರ್ಯಾರನ್ನು ಸಮರ್ಥಿಸಿಕೊಂಡಿದ್ದಾರೆ. ಸದ್ಯ ಮಾಧುರಿ ‘ಮಾ ಬೆಹೆನ್’ ಚಿತ್ರದಲ್ಲಿ ನಟಿಸಿದ್ದು, ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net