

ಮುಂಬೈ: ಬಾಲಿವುಡ್ನ ಖ್ಯಾತ ನಟ ಅಮಿತಾಬ್ ಬಚ್ಚನ್ ಜತೆ ಮಾಧುರಿ ಜೋಡಿಯಾಗಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿರುವ ಸಿನಿಮಾವೊಂದರಲ್ಲಿ ಮಾಧುರಿ ದೀಕ್ಷಿತ್ ಬ್ರಾ ಧರಿಸಿ ಶೂಟಿಂಗ್ ಮಾಡಲು ಹೇಗೆ ನಿರಾಕರಿಸಿದ್ದರು ಎಂಬುದನ್ನು ನಿರ್ಮಾಪಕ ಟಿನ್ನು ಆನಂದ್ ಖಾಸಗಿ ರೇಡಿಯೋ ಸಂವಾದದಲ್ಲಿ ಹೇಳಿದ್ದಾರೆ.
ಕೇವಲ ಒಳ ಉಡುಪು ಧರಿಸಬೇಕಾದ ಸೀನೊಂದನ್ನು ತಿರಸ್ಕಿರಿಸಿದ ಕಾರಣ ಮಾಧುರಿ ದೀಕ್ಷಿತ್ಗೆ ಚಿತ್ರದಿಂದ ಹೊರ ಹೋಗುವಂತೆ ತಿಳಿಸಲಾಗಿತ್ತು ಎಂದು ಹಿರಿಯ ಚಿತ್ರ ನಿರ್ಮಾಪಕ ಟಿನ್ನು ಆನಂದ್ ದಶಕಗಳ ಹಿಂದಿನ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
ನಿರ್ಮಾಪಕ ಟಿನ್ನು ಆನಂದ್ ಖಾಸಗಿ ರೇಡಿಯೋ ಸಂವಾದದಲ್ಲಿ ಮಾತನಾಡುವ ಸಂದರ್ಭದಲ್ಲಿ, 1984ರಲ್ಲಿ ಶನಾಕ್ತ್ ಎಂಬ ಸಿನಿಮಾದ ಚಿತ್ರೀಕರಣದ ವೇಳೆ ನಡೆದಿದ್ದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮತ್ತು ಮಾಧುರಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಬೇಕಿತ್ತು."ಸಿನಿಮಾ ಕಾಂಟ್ರಾಕ್ಟ್ ಸಹಿ ಮಾಡುವಾಗಲೇ ಈ ರೀತಿಯ ಬಟ್ಟೆ ಧರಿಸಬೇಕಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದೆ. ಆಗ ಎಲ್ಲದಕ್ಕೂ ಒಪ್ಪಿಗೆ ಸೂಚಿಸಿದ್ದರು. ಈ ಸೀನ್ಗಾಗಿ ಮಾಧುರಿಗೆ ಅಗತ್ಯ ಇರುವ ಬ್ರಾ ಡಿಸೈನ್ ಮಾಡುವಂತೆಯೂ ತಿಳಿಸಲಾಗಿತ್ತು. ಯಾವ ರೀತಿಯ ಡಿಸೈನ್ ಬೇಕು ಅದನ್ನೇ ಆಯ್ಕೆ ಮಾಡಿಕೊಳ್ಳುವಂತೆಯೂ ಹೇಳಲಾಗಿತ್ತು. ಎಲ್ಲದ್ದಕ್ಕೂ ಓಕೆ ಎಂದಿದ್ದ ಮಾಧುರಿ, ಶೂಟಿಂಗ್ ಸಂದರ್ಭದಲ್ಲಿ ಮಾತ್ರ ಈ ದೃಶ್ಯವನ್ನು ನಿರಾಕರಿಸಿದ್ದಳು.
ಚಿತ್ರೀಕರಣದ ಮೊದಲ ದಿನ ವಿಲನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ರವಿಕೆ ಕಳಚುವ ಸೀನ್ ಇತ್ತು. ಆದರೆ ಆಗ 45 ನಿಮಿಷಗಳು ಕಳೆದರೂ ಅವರು ಡ್ರೆಸಿಂಗ್ ಕೋಣೆಯಿಂದ ಹೊರಗೆ ಬರಲೇ ಇಲ್ಲ. ಒಳಗೆ ಹೊಗಿ ನೋಡಿದಾಗ ಇನ್ನೂ ತಾಯಾರಾಗಿರಲಿಲ್ಲ. ವಿಚಾರಿಸಿದಾಗ ತಾನು ಈ ಸೀನ್ ಮಾಡುವುದಿಲ್ಲ ಎಂದರು. ಹಾಗಾದರೆ ಪ್ಯಾಕಪ್ ಮಾಡಿ ಸಿನಿಮಾಗೆ ಗುಡ್ ಬೈ ಹೇಳಿ. ಚಿತ್ರೀಕರಣ ರದ್ದು ಮಾಡುತ್ತೇನೆ ಎಂದಿದ್ದೆ" ಎಂದು ತಿಳಿಸಿದ್ದಾರೆ.
ಬಳಿಕ ಮಾಧುರಿ ದೀಕ್ಷಿತ್ ಕಾರ್ಯದರ್ಶಿ ಬಂದು ಆಕೆಗೆ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಕೇಳಿಕೊಂಡಿದ್ದರು. ಸುನಿಮಾ ಕೇವಲ 5 ದಿನಗಳ ಕಾಲ ಮಾತ್ರ ಚಿತ್ರೀಕರಣಗೊಂಡಿತ್ತು ಎಂದು ಟಿನ್ನು ಆನಂದ್ ಮಾಧುರಿ ದೀಕ್ಷಿತ್ ಜತೆ ಸಿನಿಮಾ ಚಿತ್ರೀಕರಣದ ಅನುಭವ ಹೇಗಿತ್ತು ಎಂದು ಮೆಲುಕು ಹಾಕಿದ್ದಾರೆ.