ಮಾಡತ್ತಡ್ಕ ಕ್ವಾರಿಗೆ ಅಶೋಕ್ ರೈ ಭೇಟಿ - ೧೫ಕ್ಕೆ ಸಂತ್ರಸ್ತರ-ಕ್ವಾರಿಯವರ ಸಭೆಗೆ ನಿರ್ಧಾರ

PTR_9 MAR_2
Published on

ವಿಟ್ಲ: ಮಾಡತ್ತಡ್ಕದ ಕ್ವಾರಿಯಲ್ಲಿ ಕಲ್ಲು ಒಡೆಯುವುದಕ್ಕಾಗಿ ತಂದ ಸೋಟಕಗಳು ಬಿಸಿಲಿನ ತೀವ್ರತೆಗೆ ಸಿಡಿದು ಹಾನಿಗೊಂಡ ಮನೆಗಳಿಗೆ ಭಾನುವಾರ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದರು. ಕ್ವಾರಿ ನಡೆಸುತ್ತಿರುವ ವಿಚಾರದಲ್ಲಿ ಊರಿನವರ ಅಭಿಪ್ರಾಯವನ್ನು ಸಂಗ್ರಹಿಸಿ, ಮಾ.೧೫ರಂದು ಕಚೇರಿಯಲ್ಲಿ ಸಂತ್ರಸ್ತರ, ಕ್ವಾರಿಯವರ ಹಾಗೂ ಅಽಕಾರಿಗಳ ಸಭೆ ನಡೆಸುವುದಾಗಿ ತಿಳಿಸಿದರು.

ಕ್ವಾರಿ ನಡೆಸುವುದಕ್ಕೆ ಯಾವುದೇ ತಕರಾರು ಇಲ್ಲ, ಆದರೆ ವಾಹನಗಳ ಓಡಾಟದಿಂದ ಸಮಸ್ಯೆಯಾಗುತ್ತಿದೆ. ರಸ್ತೆಗಳು ಧೂಳಿನಿಂದ ತುಂಬಿಕೊಂಡಿದ್ದು, ಓಡಾಡುವುದು ಅಸಾಧ್ಯವಾಗಿದೆ. ಕೆಲವು ಭಾಗದಲ್ಲಿ ರಸ್ತೆಯ ದುರಸ್ತಿ ನಡೆಸದೆ ಸಮಸ್ಯೆಯಾಗುತ್ತಿದೆ ಎಂದು ಊರಿನವರು ಶಾಸಕರಲ್ಲಿ ಹೇಳಿಕೊಂಡರು.

ಅಶೋಕ್ ಕುಮಾರ್ ರೈ ಮನೆಗಳಿಗೆ ನೈಜವಾಗಿ ಹಾನಿಯಾಗಿರುವ ವರದಿಕೊಡುವಂತೆ ಕಂದಾಯ ಅಽಕಾರಿಗಳಿಗೆ ಸೂಚಿಸಿ ದರು. ಶನಿವಾರದ ಮೊದಲು ಸಂಪೂರ್ಣ ವರದಿಯನ್ನು ಸಿದ್ಧಪಡಿಸಬೇಕಾಗಿದೆ. ಕಲ್ಲಿನ ಕ್ವಾರಿಯವರಿಗೆ ನೋಟಿಸ್ ಜಾರಿ ಮಾಡಿ ಹಾನಿಯನ್ನು ಭರಿಸುವಂತೆ ಸೂಚಿಸಲಾಗುವುದು. ಈ ಭಾಗವನ್ನು ಕ್ರಷರ್ ಜೋನ್ ಎಂದು ಘೋಷಿಸಿದ್ದು, ಕ್ವಾರಿಗಳನ್ನು ಜನರಿಗೆ ಸಮಸ್ಯೆಯಾಗದಂತೆ ಕಾನೂನಾತ್ಮಕವಾಗಿ ನಡೆಸಬೇಕಾಗಿದೆ. ನಿರ್ಲಕ್ಷ್ಯ ತೋರಿಸಿ ವಸತಿ ಪ್ರದೇಶದ ಸಮೀಪದಲ್ಲಿ ಸೋಟಕಗಳನ್ನು ಇಡಬಾರದು. ಗ್ರಾಮಸ್ಥರಿಗೆ ತೊಂದರೆಯಾದಂತೆ ನೋಡುವ ಜವಾಬ್ದಾರಿ ನಮ್ಮದು. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಕಾಂಗ್ರೆಸ್ ವಲಯ ಅಧ್ಯಕ್ಷ ಸುಶಾಂತ್ ಶೆಟ್ಟಿ, ಯೂತ್ ಉಪಾಧ್ಯಕ್ಷ ಸುಮಿತ್ ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ವಿನೋದ್ ಮಾಡತ್ತಾರು, ಕೃಷಿ ಘಟಕದ ಅಧ್ಯಕ್ಷ ಎಲ್ಯಣ್ಣ ಪೂಜಾರಿ, ಬೂತ್ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ಕುಂಡಡ್ಕ, ಕಂದಾಯ ನಿರೀಕ್ಷಕ ರವಿ ಎಂ.ಎನ್. ಮತ್ತಿತರರು ಉಪಸ್ಥಿತರಿದ್ದರು.

ಇಬ್ಬರ ಮೇಲೆ ದೂರು?

ತಡವಾಗಿ ಬಂದ ಪೊಲೀಸ್ ಅಽಕಾರಿಗಳಿಗೆ ಽಕ್ಕಾರ ಕೂಗಿದ ವಿಚಾರದಲ್ಲಿ ಸ್ಥಳೀಯ ಇಬ್ಬರು ಯುವಕರನ್ನು ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆದ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದಾರೆ. ತಕ್ಷಣ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕರಿಗೆ ದೂರವಾಣಿ ಮೂಲಕ ಮಾತನಾಡಿ ಸೋಟಕ್ಕೆ ಕಾರಣವಾದವರ ಮೇಲೆ ಕ್ರಮಕೈಗೊಳ್ಳಿ, ಸ್ಥಳೀಯ ಯುವಕರನ್ನು ವಿಚಾರಣೆಗೆ ಕರೆಯುವ ನೆಪದಲ್ಲಿ ಯಾವುದೇ ಸಮಸ್ಯೆಯನ್ನು ಮಾಡಬಾರದು. ಬೀಟ್ ಪೊಲೀಸರು ಅವರನ್ನು ಮತ್ತೆ ಠಾಣೆಗೆ ಕರೆಸಬಾರದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net