'ಮ್ಯಾಡ್'​ ಟ್ರೇಲರ್​ ಅನಾವರಣಗೊಳಿಸಿದ ಜೂ. ಎನ್​ಟಿಆರ್​; ಯುವಜನತೆಗೆ ಈ ಸಿನಿಮಾ

Untitled design - 2023-10-03T145556.788
Published on

ಆಂಧ್ರಪ್ರದೇಶ: ನಾರ್ನೆ ನಿತಿನ್, ಸಂಗೀತ್ ಶೋಭನ್, ರಾಮ್ ನಿತಿನ್ ಹಾಗೂ ಗೌರಿ ಪ್ರಿಯಾ ರೆಡ್ಡಿ, ಅನಾನಾತಿಕಾ ಸನಿಲ್‌ಕುಮಾರ್, ಗೋಪಿಕಾ ಉದ್ಯಾನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ ತೆಲುಗು ಚಿತ್ರ 'ಮ್ಯಾಡ್​' ಇದೇ ಅಕ್ಟೋಬರ್ 6 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಸದ್ಯ ಚಿತ್ರದ ಅಧಿಕೃತ ಟ್ರೇಲರ್​ ಇಂದು ತೆರೆಕಂಡಿದೆ.

ಕಲ್ಯಾಣ್ ಶಂಕರ್ ನಿರ್ದೇಶನದ ಈ ಚಿತ್ರವು ಯುವಜನತೆಗೆ ಹೆಚ್ಚು ಹತ್ತಿರವಾಗಲಿದೆ ಹಾಗೂ ಮನರಂಜನೆ ನೀಡಲಿದೆ ಎಂದು ಈ ಹಿಂದೆಯೇ ಚಿತ್ರತಂಡ ತಿಳಿಸಿತ್ತು. ಟ್ರೇಲರ್​ಗಾಗಿ ಕುತೂಹಲ ವ್ಯಕ್ತಪಡಿಸಿದ್ದ ಸಿನಿಪ್ರೇಕ್ಷಕರಿಗೆ ಇಂದು ಸಿನಿಮಾದ ಒಂದು ಮುನ್ನೋಟ ದೊರಕಿದೆ. ಇಂದು 'ಮ್ಯಾಡ್​' ಟ್ರೇಲರ್​ನ ಡಿಜಿಟಲ್​ ಲಾಂಚ್​ ಅನ್ನು ಟಾಲಿವುಡ್​ ಸ್ಟಾರ್​, 'ಆರ್​​ಆರ್​ಆರ್​ ಖ್ಯಾತಿಯ ನಟ ಜೂ. ಎನ್​ಟಿಆರ್​ ಅನಾವರಣಗೊಳಿಸಿದರು.

ಮೂವರು ಸ್ನೇಹಿತರ ಜೀವನದಲ್ಲಿ ನಡೆಯುವ ಘಟನೆಗಳು, ಕಾಲೇಜು ದಿನಗಳಲ್ಲಿ ಎದುರಾಗುವ ಹಾಸ್ಯ ಪ್ರಸಂಗಗಳು ಸಿನಿಮಾದ ಕಥಾಹಂದರ ಎಂದು ಹೇಳಲಾಗಿದೆ. ಈ ಚಲನಚಿತ್ರ ಯುವಕರು, ಯುವಕರಿಗಾಗಿ ರಚಿಸಲಾಗಿದೆ. ಅವರಿಗೆ ಚಿತ್ರಮಂದಿರಗಳಲ್ಲಿ ಮನರಂಜನೆ ಮತ್ತು ಉತ್ತಮ ಅನುಭವವನ್ನು ನೀಡಲಿದೆ ಎಂದು ಚಿತ್ರ ತಯಾರಕರು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net