ಶರಣ ವೀರೇಶ್ವರ ಸಹಕಾರಿ ಬ್ಯಾಂಕ್‌ ನೂತನ ನಿರ್ದೇಶಕರ ವಿಜಯೋತ್ಸವ

M.S.Patil, Shri Sharan Veereshwar Cooperative Bank, Director Vijayotsava, M.B.Shop, Vimalabai Deshmukh, Siddappa Gowda Patil, Nalatwada,
ನಾಲತವಾಡ ಪಟ್ಟಣದ ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕರ ವಿಜಯೋತ್ಸವ, ಸನ್ಮಾನ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಎಂ.ಎಸ್.ಪಾಟೀಲ ಮಾತನಾಡಿದರು. ಮಹಾಂತೇಶ ನೂಲಿನವರ, ರಾಜು ಹಾದಿಮನಿ ಇತರರಿದ್ದರು.
Published on

ನಾಲತವಾಡ: ಪ್ರತಿಯೊಂದು ಕೆಲಸ ಯಶಸ್ವಿಗೊಳ್ಳಲು ಭಗವಂತನ ಕೃಪೆ ಇದ್ದೇ ಇರುತ್ತದೆ ಎನ್ನುವುದಕ್ಕೆ ಪಟ್ಟಣದ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್‌ಗೆ ನಡೆದ ಚುನಾವಣೆಯಲ್ಲಿ ಎಲ್ಲ 13 ಸ್ಥಾನಗಳ ಅವಿರೋಧ ಆಯ್ಕೆಯೇ ಚೊಕ್ಕ ಉದಾಹರಣೆಯಾಗಿದೆ ಎಂದು ನೂತನ ಅಧ್ಯಕ್ಷ ಎಂ.ಎಸ್.ಪಾಟೀಲ ಹೇಳಿದರು.

ಸ್ಥಳೀಯ ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್‌ನ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರ ವಿಜಯೋತ್ಸವದ ವೇಳೆ ಸನ್ಮಾನ ಸ್ವೀಕರಿಸಿ ಅವರು ಮಂಗಳವಾರ ಮಾತನಾಡಿದರು.

1997 ರಲ್ಲಿ ಅಲ್ಪ ಬಂಡವಾಳ ಮೂಲಕ ಆರಂಭಗೊಂಡ ಬ್ಯಾಂಕ್ ನಿರಂತರವಾಗಿ ಕೋಟಿಗಟ್ಟಲೇ ವ್ಯವಹಾರ ಮಾಡುತ್ತ ಸದ್ಯ ನೂರಾರು ಕೋಟಿ ಲಾಭದತ್ತ ಮುಖ ಮಾಡಿದೆ. ಅಂದಿನ ಹಿರಿಯರಾದ ದಿ.ಎಂ.ಬಿ.ಅಂಗಡಿ, ವಿಮಲಾಬಾಯಿ ದೇಶಮುಖ ಹಾಗೂ ಸಿದ್ದಪ್ಪಗೌಡ ಪಾಟೀಲರ ಶ್ರಮ ಸ್ಮರಣೀಯ ಎಂದರು.

ಸಿಎಆರ‌್ಪಿ ಮಹಾಂತೇಶ ನೂಲಿನವರ, ಶಿಕ್ಷಕ ರಾಜು ಹಾದಿಮನಿ ಮಾತನಾಡಿ, ಬ್ಯಾಂಕ್‌ನ ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಹಾಲಿ ನಿರ್ದೇಶಕರ ರಾಜಕೀಯ ರಹಿತ ಶ್ರಮದಿಂದ ಪಟ್ಟಣದ ಶರಣರ ಬ್ಯಾಂಕ್ ಯಶಸ್ವಿಯತ್ತ ಸಾಗಿದೆ ಎಂದರು.

ನ್ಯಾಯವಾದಿ ಬಸವರಾಜ ತಾಳಿಕೋಟಿ, ಬಸವರಾಜ ತಾಳಿಕೋಟಿ, ಮಲ್ಲಿಕಾರ್ಜುನ ಅಂಗಡಿ, ಗುರುಸಂಗಪ್ಪ ಗಡೇದ, ಬಸವಂತಪ್ಪ ಗಂಗನಗೌಡ್ರ, ಶಂಕ್ರಪ್ಪ ನಾಗರದಿನ್ನಿ, ಶಿವಪುತ್ರಯ್ಯ ಸ್ಥಾವರಮಠ, ಕೆ.ಆರ್.ಎತ್ತಿನಮನಿ, ಸಂಗಣ್ಣ ಹಡಲಗೇರಿ, ಬಸವರಾಜ ತಿರುಮುಖೆ, ಬಾಲಪ್ಪ ಹಟ್ಟಿ, ಸುಮಿತ್ರಾ ದೇಶಮುಖ, ಭಾರತೀ ಮೇಟಿ, ನಾಗರಾಜ ಗಂಗನಗೌಡರ, ಅಮರಪ್ಪ ಗಂಗನಗೌಡರ, ಕೆ.ಆರ್.ಬಿರಾದಾರ, ಪವಾಡಬಸ್ಸು ದೇಶಮುಖ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net