

ಬೆಂಗಳೂರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಜಿಇಟಿ ಪರೀಕ್ಷೆ ಲಿತಾಂಶವನ್ನು ಪ್ರಕಟಿಸಿದ್ದು, ಎಂ. ಫಾರ್ಮಾ ಕೋರ್ಸುಗಳ ಪ್ರವೇಶಾತಿಗೆ ಸೋಮವಾರ (ಜ.29) ಸಂಜೆ 6ರಿಂದ ಆಪ್ಷನ್ ಎಂಟ್ರಿ ಆರಂಭವಾಗಲಿದೆ.
ಜ.29ರಂದು 6 ಗಂಟೆಗೆ ಆಪ್ಷನ್ ಎಂಟ್ರಿ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳುವುದು, ಜ.30ರ ಮಧ್ಯಾಹ್ನ 2ರಿಂದ ಫೆ.1ರ ಬೆಳಗ್ಗೆ 11 ಗಂಟೆಯವರೆಗೆ ತಮ್ಮ ಆಯ್ಕೆಗಳನ್ನು ದಾಖಲಿಸಬಹುದು. ಫೆ.1ರ ಸಂಜೆ 6ರ ನಂತರ ಅಣಕು ಸೀಟು ಹಂಚಿಕೆ ಮಾಡಲಾಗುತ್ತದೆ. ಫೆ.3ರ ಬೆಳಗ್ಗೆ 11ರ ವರೆಗೂ ಆಯ್ಕೆ/ಇಚ್ಛೆಗಳನ್ನು ಬದಲಿಸಲು ಅವಕಾಶವಿದೆ. ಫೆ.3ರ ಸಂಜೆ 6 ಗಂಟೆಯ ನಂತರ ಸೀಟು ಹಂಚಿಕೆ ಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ.