

ಬೆಂಗಳೂರು ದಕ್ಷಿಣ: ಶಾಸಕನಾಗಿ ಅನುಷ್ಠಾನಗೊಳಿಸಿದ ಅನೇಕ ಅಭಿವೃದ್ಧಿ ಕಾರ್ಯಗಳ ಫಲವಾಗಿ ಕ್ಷೇತ್ರದ ಜನತೆ ನನ್ನನ್ನು ಮೂರು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದು, ಈ ಬಾರಿಯೂ ಆಶೀರ್ವದಿಸಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಹಾರಗದ್ದೆ ಗ್ರಾಪಂ ವ್ಯಾಪ್ತಿಯ ವಡ್ಡರಪಾಳ್ಯ, ಹಾರಗದ್ದೆ, ಮಾದಾಪಟ್ಟಣ, ಸೀತಾನಾಯಕನಹಳ್ಳಿ, ನೊಸೆನೂರು, ದ್ಯಾವಸಂದ್ರ, ಗೊಲ್ಲಹಳ್ಳಿ, ಕಾಡುಜಕ್ಕನಹಳ್ಳಿ ಮತ್ತಿತರ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ರೋಡ್ಶೋ ಮೂಲಕ ಮತಯಾಚಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶವನ್ನು ಒಳಗೊಂಡಿರುವ ಅತಿದೊಡ್ಡ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ಕ್ಷೇತ್ರದಲ್ಲಿ ಅಭಿವೃದ್ಧಿ ಸವಾಲಾಗಿತ್ತು. ಕ್ಷೇತ್ರದ ಜನರ ವಿಶ್ವಾಸ ಸಹಕಾರ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಬೆಂಬಲದೊಂದಿಗೆ ಪೂರ್ಣಗೊಳಿಸಿದ್ದೇನೆ ಎಂದರು. ಶೇ.75 ಅಭಿವೃದ್ಧಿ ಕಾರ್ಯಗಳನ್ನು
ಬೀದಿದೀಪಗಳ ಅಳವಡಿಕೆ, ಸುಸಜ್ಜಿತ ಒಳಚರಂಡಿ ವ್ಯವಸ್ಥೆ, ಕೆರೆಗಳ ನಿರ್ವಹಣೆ, ಬಡವರಿಗೆ ಹಕ್ಕುಪತ್ರ ವಿತರಣೆ, ಬಡಮಕ್ಕಳಿಗಾಗಿ ಅತ್ಯಾಧುನಿಕ ಸೌಲಭ್ಯವುಳ್ಳ ಶಾಲಾ- ಕಾಲೇಜು ಅಭಿವೃದ್ಧಿ, 110 ಹಳ್ಳಿ ಯೋಜನೆಯಡಿ ಕಾವೇರಿ ನೀರು ಜತೆಗೆ ಶುದ್ಧ ಕುಡಿ ಯುವ ನೀರಿನ ಘಟಕಗಳ ಸ್ಥಾಪನೆ, ಪ್ರಾಥಮಿಕ ಆರೋಗ್ಯ ಕೇಂದ್ರ ಉನ್ನತೀಕರಣ, ಸುಸಜ್ಜಿತ ಆಟದ ಮೈದಾನ ಸೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಎಡಿಎ ಅಧ್ಯಕ್ಷ ರಾಜಶೇಖರ ರೆಡ್ಡಿ, ಪಿಎಲ್ಡಿ ವೆಂಕಟೇಶ್, ಬಿಜೆಪಿ ಮುಖಂಡರಾದ ಕೇಶವಮೂರ್ತಿ, ಆದಿಕೇಶವುಲು, ಭಾರತಿ ವೆಂಕಟೇಶ್, ಶಿವಣ್ಣ, ಸ್ಥಳೀಯ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಸಾಥ್ ನೀಡಿದರು.