ಚಿತ್ರ ವಿ-ಚಿತ್ರ: ಗೋಡೆಗಳಿಲ್ಲದ ಐಷಾರಾಮಿ ಹೋಟೆಲ್

Sudina-1
Published on

ನವದೆಹಲಿ: ಪ್ರವಾಸೋದ್ಯಮ ಎಂದರೆ ಅದರ ಚೌಕಟ್ಟಿನಲ್ಲಿ ಹೋಟೆಲ್ ಕೂಡ ಸೇರುತ್ತದೆ. ಆದರೆ ಸ್ವಿಜರ್ಲೆಂಡ್​ನಲ್ಲಿ ಸಮುದ್ರಮಟ್ಟದಿಂದ 6463 ಅಡಿ ಎತ್ತರದ ಬೆಟ್ಟದ ಮೇಲೆ ಹೋಟೆಲ್ ಎಂದು ಕರೆಯಲ್ಪಡುವ ಬಯಲಿಗೆ ಗೋಡೆಗಳ ಚೌಕಟ್ಟಿನ ಹಂಗಿಲ್ಲ.

ಸುತ್ತಮುತ್ತ ನೋಡಿದರೆ ನದಿ, ಪರ್ವತಶ್ರೇಣಿ, ಹಸಿರಿನ ಆಹ್ಲಾದದ ವಾತಾವರಣ. ಹಾಸಿಗೆ, ಹೊದಿಕೆ, ಬೆಡ್​ಲೈಟ್, ಕುರ್ಚಿ, ಉತ್ತಮ ಊಟೋಪಚಾರ ಒಳಗೊಂಡಂತೆ ಐಷಾರಾಮಿ ಹೋಟೆಲ್​ನಲ್ಲಿರುವ ಬಹುತೇಕ ಸೌಲಭ್ಯಗಳೂ ಅಲ್ಲಿವೆ.

ಪರ್ವತದ ಆಯ್ದ ಏಳು ಸ್ಥಳಗಳಲ್ಲಿ ಈ ವ್ಯವಸ್ಥೆಯಿದೆ. ಇಲ್ಲಿ ಒಂದು ರಾತ್ರಿಯ ವಾಸ್ತವ್ಯಕ್ಕೆ ನಿಗದಿಪಡಿಸಲಾಗಿರುವ ದರ 251 ಸ್ವಿಸ್ ಫ್ರಾಂಕ್ (ಇಪ್ಪತ್ತು ಸಾವಿರ ರೂ.). ಈ ಹೊಸ ಮಾದರಿಯ ಪರಿಕಲ್ಪನೆಯ ಚಾರ್ ಬೋನಿಯರ್ ಎಂಬ ಉದ್ಯಮಿಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net