

Lung Cancer: ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್ಗೆ ಪ್ರಮುಖ ಅಪಾಯಕಾರಿ ಅಂಶವಾಗಿದ್ದರೂ, ಎಂದಿಗೂ ಧೂಮಪಾನ ಮಾಡದ ಅನೇಕ ಜನರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಧೂಮಪಾನ ಮಾಡದೇ ಇರುವ ವ್ಯಕ್ತಿಗಳಲ್ಲಿ ಶೇ. 10-30 ರಷ್ಟು ಜನರು ಈ ರೋಗದಿಂದ ಬಳಲುತ್ತಾರೆ. ಹಾಗೆಯೇ ಧೂಮಪಾನ ಮಾಡದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣವಾಗುವ 5 ಅಂಶಗಳನ್ನು ಇತ್ತೀಚೆಗೆ ಗುರುತಿಸಲಾಗಿದೆ. ಇದರ ಜೊತೆಗೆ ಶ್ವಾಸಕೋಶದ ಕ್ಯಾನ್ಸರ್ನಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕೃಷಿ ಉತ್ಪನ್ನ ನೇರ ಮಾರಾಟಕ್ಕೆ ಮಾರುಕಟ್ಟೆ ಅವಶ್ಯಕ
ರೇಡಾನ್ ವಾಸನೆಯಿಲ್ಲದ, ಅದೃಶ್ಯ ಅನಿಲವಾಗಿದ್ದು, ನೈಸರ್ಗಿಕವಾಗಿ ಭೂಗತ ಮೂಲಗಳಿಂದ ಹೊರಹೊಮ್ಮುತ್ತದೆ. ಮಣ್ಣು ಅಥವಾ ಬಂಡೆಗಳಲ್ಲಿ ಯುರೇನಿಯಂ ವಿಭಜನೆಯ ಪ್ರಕ್ರಿಯೆಯು ಈ ಅನಿಲವನ್ನು ಉತ್ಪಾದಿಸುತ್ತದೆ. ಕಟ್ಟಡ ಅಥವಾ ಮಣ್ಣಿನ ಮೇಲೆ ಕುಳಿತಾಗ, ನೆಲ ಮತ್ತು ಗೋಡೆಯ ಬಿರುಕುಗಳ ಮೂಲಕ ಅನಿಲವು ಮನೆಯನ್ನು ಪ್ರವೇಶಿಸುತ್ತದೆ. ಇವುಗಳ ಜೊತೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತದೆ.
ಸೆಕೆಂಡ್ ಹ್ಯಾಂಡ್ ಸ್ಮೋಕ್ ಎಂಬ ಪದವು ಸಿಗರೇಟ್ ಬಿಡುವಂತಹ ಹೊಗೆಯನ್ನು ಇತರರು ಉಸಿರಾಡುವುದನ್ನು ಸೂಚಿಸುತ್ತದೆ.ಈ ಹೊಗೆಯು ಶ್ವಾಸಕೋಶದ ಕ್ಯಾನ್ಸರ್ ಬರುವ ಮುನ್ಸೂಚನೆಯಾಗಿರುತ್ತದೆ. ಇದರಿಂದ ಅನೇಕ ಸಾವುಗಳಾಗಿರುವ ಪ್ರಕರಣಗಳಿವೆ. ಧೂಮಪಾನಿಗಳೊಂದಿಗೆ ವಾಸಿಸುವಂತಹ ಜನರ ಮೇಲೂ ಈ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಜನರು ತಮ್ಮ ಕೆಲಸದ ಸಮಯದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವಾಗ ಕ್ಯಾನ್ಸರ್ ಉಂಟುಮಾಡುವ ವಸ್ತುಗಳಿಗೆ ಒಡ್ಡಿಕೊಳ್ಳುತ್ತಾರೆ. ಕಾರ್ಮಿಕರು, ಗಣಿಗಾರಿಕೆಯಲ್ಲಿ ಕೆಲಸ ಮಾಡುವಂತಹ ಜನರಲ್ಲಿ ಅಧಿಕವಾಗಿ ಈ ರೋಗ ಪತ್ತೆಯಾಗುತ್ತದೆ. ಇನ್ನು ಭಾರವಾದ ಲೋಹಗಳೊಂದಿಗೆ ಬೆಂಜೀನ್ ಮತ್ತು ಡೀಸೆಲ್ ಹೊರಸೂಸುವಿಕೆಯ ಸಂಯೋಜನೆಯು ಹೆಚ್ಚುವರಿ ಕಾಯಿಲೆಗೆ ತುತ್ತಾಗಬಹುದು.
ವಾಹನಗಳು, ಕಾರ್ಖಾನೆಗಳು ಹಾಗೂ ವಿದ್ಯುತ್ ಸ್ಥಾವರಗಳು ಬಿಡುವಂತಹ ವಿಷಾನಿಲದಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಹಾಗೇ ಈ ಅನಿಲಗಳೊಂದಿಗೆ ಗಾಳಿಯಲ್ಲಿರುವ ವಿಷಾನಿಲಗಳು ಸೇರಿಕೊಂಡು ಮಾನವನನ್ನು ಸ್ಪರ್ಶಿಸುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತವೆ.
ಶ್ವಾಸಕೋಶದ ಕ್ಯಾನ್ಸರ್ಗಳು ಬರೀ ಹೊರಗಿನ ಗಾಳಿಯಿಂದ ಮಾತ್ರ ಬರುವುದಿಲ್ಲ. ಬದಲಾಗಿ, ಅನುವಂಶಿಕ ಗುಣಗಳಿಂದಲೂ ಸಹ ಬರುತ್ತವೆ. ಅಂದರೆ, ತಂದೆ ಅಥವಾ ತಾಯಿ ಈ ಕಾಯಿಲೆಯಿಂದ ಬಳಲುತ್ತಿದ್ದರೆ ಅನುವಂಶಿಕವಾಗಿ ಮಕ್ಕಳಲ್ಲೂ ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
* ರೇಡಾನ್ ಅನಿಲಗಳು ನಿಮ್ಮ ಮನೆಗಳಲ್ಲಿ ಹರಡುವುದರಿಂದ ಒಂದು ಬಾರಿ ಮನೆಯನ್ನು ಪರೀಕ್ಷೆ ಮಾಡಿಸುವುದು ಉತ್ತಮ ವಿಧಾನವಾಗಿದೆ
* ನೀವು ಧೂಪಪಾನಿಗಳೊಂದಿಗೆ ವಾಸಿಸುತ್ತಿದ್ದರೆ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಬೇಕು
* ಮಾಲಿನ್ಯ ಇರುವಂತಹ ಪ್ರದೇಶಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸುವುದರಿಂದ ವಿಷಾನಿಲಗಳನ್ನು ತಡೆಯಲು ಸಹಾಯವಾಗುತ್ತದೆ
* ಅಡುಗೆಗಾಗಿ ಶುದ್ಧ ಅನಿಲವನ್ನು ಆಯ್ಕೆಮಾಡಬೇಕು
* ಅಪಾಯಕಾರಿ ಜಾಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವಂತವರು ತಮ್ಮ ಆರೋಗ್ಯದ ಕಡೆ ನಿಗಾವಹಿಸಬೇಕು
* ಶ್ವಾಸಕೋಶದ ಕ್ಯಾನ್ಸರ್ ಕುಟುಂಬದಲ್ಲಿ ಯಾರಿಗಾದರೂ ಇದ್ದಲ್ಲಿ ಮನೆಯವರು ಆರೋಗ್ಯ ತಪಾಸಣೆ ಮಾಡಿಸುವುದರಿಂದ ರೋಗಕ್ಕೆ ಒಳಪಡದಂತೆ ಪಾರಾಗಬಹುದು. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.