

ಬೆಂಗಳೂರು: ವಿಶ್ವವನ್ನೇ ದಿಕ್ಕೆಡಿಸಿರುವ ಕರೊನಾ ಸೋಂಕಿನ ಚಿಕಿತ್ಸೆಯಲ್ಲಿ ವೆಂಟಿಲೇಟರ್ಗಳ ಪಾತ್ರ ಬಹುಮುಖ್ಯವಾಗಿದ್ದು, ಯೂರೋಪ್ನಲ್ಲಿರುವ ಕನ್ನಡಿಗರೊಬ್ಬರು ಕಡಿಮೆ ವೆಚ್ಚದ ವೆಂಟಿಲೇಟರ್ ಆವಿಷ್ಕಾರ ಮಾಡಿ ಮಹಾಮಾರಿ ವಿರುದ್ಧದ ಹೋರಾಟಕ್ಕೆ ನೆರವಾಗಿದ್ದಾರೆ.
ಮೂಲತಃ ಸೋಮವಾರಪೇಟೆಯ ಪ್ರೊ.ಡಾ.ಕಿರಣ್ ಶೇಖರ್ ಅಸ್ಟ್ರೇಲಿಯಾದ ಫ್ರಿನ್ಸ್ ಚಾರ್ಲೆಸ್ ಆಸ್ಪತ್ರೆಯಲ್ಲಿ ಸಂಶೋಧಕ ಮತ್ತು ತುರ್ತು ನಿಗಾ ಘಟಕ(ಐಸಿಯು) ಹಿರಿಯ ತಜ್ಞರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇಂಜಿನಿಯರ್ಗಳ ತಂಡದೊಂದಿಗೆ ಸೇರಿ ಕಡಿಮೆ ವೆಚ್ಚದಲ್ಲಿ ಕರೊನಾ ಸೋಂಕಿತರಿಗೆ ಕೃತಕ ಉಸಿರಾಟಕ್ಕೆ ಅವಕಾಶ ಕಲ್ಪಿಸುವ ವೆಂಟಿಲೇಟರ್ ಅನ್ನು ಆವಿಷ್ಕಾರ ಮಾಡಿದ್ದಾರೆ. ‘ಒಜಡ್ ವೇಡರ್’ ಹೆಸರಿನ ಈ ವೆಂಟಿಲೇಟರ್ ಹಾಲಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ವೆಂಟಿಲೇಟರ್ಗಳ ಬೆಲೆಗಿಂತ 10 ಪಟ್ಟು ಕಡಿಮೆ ದರದಲ್ಲಿ ಸಿಗಲಿದೆ. ಬ್ರಿಸ್ಬೇನ್ ಮೂಲದ ಕಂಪನಿ ‘ಒಲಿಟಿಕ್’ನ ಜತೆಗೆ ಮೆಡಿಕಲ್ ಇಂಜಿನಿಯರಿಂಗ್ ರಿಸರ್ಚ್ ಫ್ಯಾಕಲ್ಟಿ(ಎಂಇಆರ್ಎಫ್), ಕ್ಯೂಸ್ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಕ್ಯೂಯುಟಿ) ಸಹಯೋಗದೊಂದಿಗೆ ಇದನ್ನು ತಯಾರಿಸಲಾಗಿದೆ. ವೆಂಟಿಲೇಟರ್ ಉತ್ಪಾದನೆಗೆ ಥೆರಾಪಿಟೆಮಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್(ಟಿಜಿಎ) ಅನುಮತಿ ಬಾಕಿ ಇದೆ.
ಈ ಕುರಿತು ಮಾತನಾಡಿದ ಡಾ.ಕಿರಣ್ ಶೇಖರ್, ಕಡಿಮೆ ವೆಚ್ಚದ ವೆಂಟಿಲೇಟರ್ ನಿರ್ಮಾಣ ಮಾಡುವುದರ ಜತೆಗೆ ಹೆಚ್ಚಿನ ಸುರಕ್ಷತೆ ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಅಭಿವೃದ್ಧಿಶೀಲ ರಾಷ್ಟ್ರಗಳು ಅಗ್ಗದ ಉಪಕರಣವನ್ನು ತ್ವರಿತವಾಗಿ ತಯಾರಿಸುವುದರಲ್ಲಿ ಮುಂದಿರುತ್ತದೆ ಎಂಬ ಮಾತಿದೆ. ಇದನ್ನು ‘ಒಜಡ್ ವೇಡರ್’ ಮಾಡಿ ತೋರಿಸಿದೆ. ಆ ಮೂಲಕ ದೇಶದಲ್ಲಿರುವ ಲಕ್ಷಾಂತರ ಬಡವರ ಪ್ರಾಣವನ್ನು ಉಳಿಸಿದೆ ಎಂದರು. ಒಲಿಟಿಕ್ ಕಂಪನಿ ಎಂಡಿ ಜೇಮ್್ಸ ಒಲಿವರ್ ಅವರು ರೋಬ್ಯಾಟಿಕ್ಸ್ ಇಂಜಿನಿಯರಿಂಗ್ ಮತ್ತು ಗಣಿಗಾರಿಕೆ ಉದ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈಗಾಗಲೇ ವೈದ್ಯಕೀಯ ಉಪಕರಣಗಳ ಪೂರೈಕೆಯ ದಾರಿಯಲ್ಲಿ ಹೋಗುವುದಕ್ಕೆ ಇಷ್ಟ ಪಡುವುದಿಲ್ಲ. ಬದಲಾಗಿ ಕೈಗಾರಿಕಾ ಘಟಕಗಳ ಮೂಲ ದಾರಿಯಲ್ಲಿ ಹೋಗಲು ಇಚ್ಛಿಸುತ್ತೇವೆ ಎಂದು ಅವರ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು. ಎಂಇಆರ್ಎಫ್ ಸಹ ನಿರ್ದೇಶಕ ರಾಸ್ ಕ್ರಾಫರ್ಡ್, ಜಾಗತಿಕವಾಗಿ ಕಾಡುತ್ತಿರುವ ಕರೊನಾ ವೈರಸ್ನಿಂದ ರೋಗಿಗಳನ್ನು ಸಂರಕ್ಷಿಸಲು ಈ ವೆಂಟಿಲೇಟರ್ ಪರಿಣಾಮಕಾರಿ ಕೆಲಸ ಮಾಡಲಿದೆ ಎಂದರು.