

ವಿಜಯಪುರ: ಎರಡು ವರ್ಷಗಳ ಪ್ರೀತಿ ನೇಣಿಗೆ ಶರಣಾಗುವ ಮೂಲಕ ಅಂತ್ಯ ಕಂಡಿದೆ. ಪ್ರೇಮಿಗಳಿಬ್ಬರು ಜೈನಾಪೂರ ಗ್ರಾಮದ ಹೊರವಲಯದ ತೊಟವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಕೇಶ್ ಅಂಗಡಿ(23) ಮತ್ತು ಸಾವಿತ್ರಿ ಅಂಬಲಿ(19) ಮೃತ ಪ್ರೇಮಿಗಳು. ಇವರಿಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಯಾವ ಕಾರಣಕ್ಕಾಗಿ ನೇಣಿಗೆ ಕೊರಳೊಡ್ಡಿದ್ದಾರೆ ಎಂದು ತಿಳಿದು ಬಂದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ದಿನ ರಾಕೇಶ್ ಮತ್ತು ಸಾವಿತ್ರಿ ಮನೆಯಿಂದ ಒಟ್ಟಿಗೆ ಹೊರ ಹೋಗಿದ್ದಾರೆ.
ಬಸವನಬಾಗೇವಾಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸ್ ತನಿಖೆಯಿಂದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಗೊತ್ತಾಗಬೇಕಿದೆ.