ಅರಿಶಿಣದ ತಾಳಿ ಕಟ್ಟಿ ವಿಷ ಕುಡಿಸಿ ಹದಿನಾರರ ಬಾಲಕಿಯ ಕೊಲೆಗೈದನೇ 20ರ ಹರೆಯದ ಯುವಕ!

Youth 1 jan 20
Published on

ಬಾಗಲಕೋಟೆ: ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಅಪ್ರಾಪ್ತೆಗೆ ಅರಿಶಿಣದ ತಾಳಿ ಕಟ್ಟಿ, ವಿಷ ಕುಡಿಸಿ ಕೊಲೆಗೈದಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಗುಳೇದಗುಡ್ಡ ತಾಲೂಕಿನ ಹುಲ್ಲಿಕೇರಿ ಎಸ್. ಪಿ ಗ್ರಾಮದದಲ್ಲಿ ಘಟನೆ ನಡೆದಿದೆ.

ದ್ಯಾಮವ್ವ ಬೂದಿಹಾಳ (16) ಮೃತಪಟ್ಟ ಬಾಲಕಿ. ಕುಮಾರ ಪಾಟೀಲ(20) ಎಂಬ ಯುವಕನ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ಹತ್ತನೇ ತರಗತಿ ಓದುತ್ತಿದ್ದ ದ್ಯಾಮವ್ವ ಹಾಗೂ ಕುಮಾರ ಕೆಲ ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನಿನ್ನೆ ದ್ಯಾಮವ್ವ ಶಾಲೆಗೆ ಹೋಗಿದ್ದಾಗ ಆಕೆಯನ್ನು ಕರೆದೊಯ್ದು, ಗ್ರಾಮದ ಹೊರವಲಯದಲ್ಲಿ ಅರಿಶಿಣದ ತಾಳಿ ಕಟ್ಟಿ, ವಿಷ ಕುಡಿಸಿ ಕೊಲೆ ಮಾಡಿದ್ದಾನೆ ಎಂದು ಅಪ್ರಾಪ್ತೆಯ ಪಾಲಕರು ಆರೋಪಿಸಿದ್ದಾರೆ.

ಪ್ರೀತಿಗೆ ವಿರೋಧ ಹಿನ್ನೆಲೆ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೂ ಎಂಬ ಮಾಹಿತಿಯೂ ಇದೆ. ಆದರೆ, ಯಾವುದೇ ಸತ್ಯವೆಂಬುದು ಪ್ರಕರಣದ ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಯುವಕನೂ ವಿಷ ಸೇವಿಸಿದ್ದು, ಆತನನ್ನು ಗುಳೇದಗುಡ್ಡ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net