ರೀಲ್ಸ್ ನೋಡಿ ಹುಡುಗನೊಂದಿಗೆ ಓಡಿಹೋಗಿದ್ದ ಯುವತಿ ಆಗ್ರಾದಲ್ಲಿ ಪತ್ತೆ! love

lovers
Published on

Love | ಪ್ರೀತಿ ಮಾಡೋ ವಯಸ್ಸಲ್ಲಿ ಕೆಲವರು ತಮ್ಮ ಮೊಬೈಲ್​ನಲ್ಲಿ ಬರೋ ಸಿನಿಮಾದ ವಿಡಿಯೋಗಳನ್ನು​ ನೋಡಿ ಓಡಿ ಹೋಗೋ ಪ್ಲಾನ್​ ಮಾಡಿಕೊಳ್ತಾರೆ. ಆದಾದ ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ ತಾವು ಮಾಡಿದ್ದು ತಪ್ಪು ಎಂದು. ಅಂದ ಹಾಗೆ ಇಂತಹದ್ದೇ ಇಲ್ಲೊಂದು ಘಟನೆ ನಡೆದಿದೆ. ಪ್ರೀತಿ ಮತ್ತು ಸಾಹಸದ ಸಿನಿಮಾದಿಂದ ಮೋಹಿತಳಾದ ಉತ್ತರ ದೆಹಲಿಯ ಹೊರವಲಯದ ಹದಿಹರೆಯದ ಹುಡುಗಿಯೊಬ್ಬಳು 19 ವರ್ಷದ ಯವನೊಂದಿಗೆ ಓಡಿ ಹೋಗಿ ಕೊನೆಗೆ ಸಿಕ್ಕಿ ಬಿದ್ದಿದ್ದಾಳೆ.

3, ಫೆಬ್ರವರಿ, 2024 ರಂದು ನರೇಲಾದಿಂದ ಈ ಹುಡುಗಿ ಓಡಿ ಹೋಗಿದ್ದಳು. ಆಕೆಯ ಕುಟುಂಬವು ಡಿಸೆಂಬರ್ 3 ರಂದು ನರೇಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಸಂಬಂಧ ಎಫ್​ಐಆರ್​ ಕೂಡ ದಾಖಲಾಗಿತ್ತು. ಎಫ್‌ಐಆರ್ ದಾಖಲಾದ ನಂತರ ಅಪರಾಧ ವಿಭಾಗದ ಸೈಬರ್ ಸೆಲ್, ಹುಡುಗಿಯನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿತ್ತು. ಅಂದಿನಿಂದ ಇಲ್ಲಿಯವರೆಗೆ ಆಕೆಯನ್ನು ಪೊಲೀಸರು ಹುಡುಕಲು ಪ್ರಾರಂಭಿಸಿದ್ದರು. ಇನ್ನೂ ಆಕೆಯನ್ನ ಹುಡುಕಿ ಕೊಟ್ಟವರಿಗೆ ಅಥವಾ ಆಕೆಯ ಬಗ್ಗೆ ಸುಳಿವು ಕೊಟ್ಟವರಿಗೆ 20,000 ರೂ. ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದರು. ಕೊನೆಗೆ ಆಕೆ ಆಗ್ರಾದಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆ ಹುಡುಗಿ ಓಡಿಹೋಗಲು ಆಕೆಯ ಶಾಲಾ ಸಹಪಾಠಿಗಳೇ ಕಾರಣ ಎಂದು ಹೇಳಲಾಗಿದೆ. ಸಿನಿಮಾ ಸ್ಟೈಲ್​ನಲ್ಲಿ ಓಡಿ ಹೋಗುವಂತೆ ಪ್ರೇರೇಪಿದ್ದರು ಎನ್ನಲಾಗಿದೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಲಭ್ಯವಾಗಿದ್ದು, ಬಾಲಕಿ ನವದೆಹಲಿ ರೈಲು ನಿಲ್ದಾಣದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುವ ರೈಲು ಹತ್ತುತ್ತಿದ್ದಾಗ ಪೊಲೀಸ್​ ತಂಡವು ಗುರುತಿಸಿದೆ. ತಂಡವು ಜಮ್ಮು ಮತ್ತು ಕಾಶ್ಮೀರದಿಂದ ಮುಂಬೈಗೆ ಮತ್ತು ಅಂತಿಮವಾಗಿ ಆಗ್ರಾಗೆ ಆಕೆಯ ಚಲನವಲನಗಳನ್ನು ಪತ್ತೆಹಚ್ಚಿದೆ ಎಂದು ಅಧಿಕಾರಿ ಹೇಳಿದ್ದಾರೆ. ಮಾರ್ಚ್ 21 ರಂದು ಅವರು ತಾಜ್ ಮಹಲ್ ಬಳಿ ವಾಸಿಸುತ್ತಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ಆಕೆಯನ್ನು ರಕ್ಷಿಸಿದರು ಎನ್ನಲಾಗಿದೆ.

(ಏಜೆನ್ಸೀಸ್​)

ಇನ್ನೂ ಘಟನೆ ಬಗ್ಗೆ ಆ ಹುಡುಗಿ ಪ್ರತಿಕ್ರಿಯಿಸಿದ್ದು, ಸಿನಿಮಾ ನೋಡಿ ಪ್ರೇರಿತಗೊಂಡು ನಾನು ಆತನೊಂದಿಗೆ ಓಡಿ ಹೋಗಿದ್ದೆ ಎಂದಿದ್ದಾಳೆ. ಇನ್ನೂ ಆಕೆ ಬೇಸರದಿಂದ ಆಗ್ರಾಕ್ಕೆ ತೆರಳಿ ಜೀವನಕ್ಕಾಗಿ ಸಣ್ಣ-ಪುಟ್ಟ ಕೆಲಸಗಳನ್ನು ಮಾಡ್ತಾ ಇದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಓಡಿಹೋಗಿದ್ದ ವ್ಯಕ್ತಿಯ ಬಗ್ಗೆ ಪೊಲೀಸರು ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net