ಲವ್​ ಬ್ರೇಕಪ್​; ಬೇರೆ ಯುವತಿಯೊಂದಿಗೆ ಮದುವೆಯಾಗದಂತೆ ಪ್ರಿಯಕರನ ಬೆರಳನ್ನೇ ಕತ್ತರಿಸಿದ ಪ್ರೇಯಸಿ| Viral news

finger
Published on

ಜಪಾನ್: ಲವ್​ ಬ್ರೇಕಪ್​ ಆಗಿದ್ದಕ್ಕೆ ಬೇಸರಗೊಂಡ ಪ್ರೇಯಸಿ ತನ್ನ ಪ್ರಿಯಕರನ ಕೈಬೆರಳನ್ನೇ ಕತ್ತರಿಸಿ ಫ್ರಿಜ್​ನೊಳಗೆ ಇರಿಸಿದ್ದ ಘಟನೆ ಜಪಾನ್​ನಲ್ಲಿ ನಡೆದಿದೆ. ಈ ಯುವತಿ ಪ್ರಿಯಕರನನ್ನು ತುಂಬಾ ಪ್ರೀತಿಸುತ್ತಿದ್ದಳು. ತಾನು ಉಂಗುರು ಹಾಕಬೇಕಿದ್ದ ಬೆರಳಿಗೆ ಮತ್ಯಾರೋ ಹಾಕಬಹುದು ಎನ್ನುವ ಕೋಪದಲ್ಲಿ ಆಕೆ ತನ್ನ ಹುಡುಗನ ಉಂಗುರದ ಬೆರಳನ್ನೇ ಕತ್ತರಿಸಿ ಫ್ರಿಜ್​ನಲ್ಲಿಟ್ಟಿದ್ದಳು ಎಂದು ಹೇಳಲಾಗಿದೆ.

ಜಪಾನ್‌ನ ಒಸಾಕಾದಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ವ್ಯಕ್ತಿ ಸ್ವತಃ ಪೊಲೀಸರಿಗೆ ಕರೆ ಮಾಡಿ ತನಗೆ ಆದ ಈ ಭಯಾನಕ ಘಟನೆಯ ಬಗ್ಗೆ ತಿಳಿಸಿದ್ದಾನೆ. ಬ್ರೇಕಪ್ ಬಗ್ಗೆ ವಿವಾದ ನಡೆದ ನಂತರ ನನ್ನ ಮೇಲೆ ತನ್ನ ಗೆಳತಿ ಸಾಕಿ ಸಾಟೊ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಯುವಕ ಹೇಳಿಕೊಂಡಿದ್ದಾನೆ.

(ಏಜೆನ್ಸೀಸ್)

ಸಾಕಿ ಸಾಟೊ ಚಾಕುವಿನಿಂದ ಯುವಕನ ಉಂಗುರದ ಬೆರಳನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ, ಆಕೆ ನಾನು ಈ ಕೆಲಸವನ್ನು ಮಾಡಿಲ್ಲ, ಬದಲಿಗೆ ಆತನೇ ತನ್ನ ಬೆರಳನ್ನು ಕತ್ತರಿಸಿಕೊಂಡಿದ್ದಾನೆ ಎಂಬ ಉತ್ತರ ನೀಡಿದ್ದಾಳೆ. ಇನ್ನೂ ಈ ಬಗ್ಗೆ ಅನುಮಾನಗೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇನ್ನೂ ಈ ಬಗ್ಗೆ ಆ ಯುವಕ ತನಗಾದ ನೋವನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ನಂತರ ಸ್ಥಳಕ್ಕೆ ಪೊಲೀಸರು ಬಂದಾಗ ಇಬ್ಬರು ಫ್ಲಾಟ್‌ನಲ್ಲಿಯೇ ಪತ್ತೆಯಾಗಿದ್ದಾರೆ. ಆ ಯುವಕನ ಎಡ ಕೆನ್ನೆ ಮತ್ತು ಮೂಗಿನ ಮೇಲೆ ಗಾಯದ ಗುರುತುಗಳು ಕೂಡ ಕಂಡು ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net