

ಬೆಂಗಳೂರು: ಲಾಟರಿ ಗೆದ್ದಿರುವುದಾಗಿ ಖಾಸಗಿ ಕಂಪನಿ ಉದ್ಯೋಗಿಗೆ ಅಂತರ್ಜಾಲದ ಮೂಲಕ ಕರೆ ಮಾಡಿ ತಿಳಿಸಿದ ಸೈಬರ್ ಕಳ್ಳರು ಮುಂಗಡ ಹಣ ಪಾವತಿಸಬೇಕಾಗಿ ನಂಬಿಸಿ 29 ಸಾವಿರ ರೂ. ಲಪಟಾಯಿಸಿದ್ದಾರೆ. ಶಾಮಣ್ಣನಗರದ ನಿವಾಸಿ ಸೈಯ್ಯದ್ ವಾಸೀಂ (24) ಹಣ ಕಳೆದುಕೊಂಡವರು.
ಏ.16ರಂದು ಸೈಯ್ಯದ್ ವಾಟ್ಸ್ಆಪ್ ನಂಬರ್ಗೆ ಕರೆ ಬಂದಿತ್ತು. ನೀವು ಕೆಬಿಸಿ ಲಾಟರಿ ಗೆದ್ದಿರುವಿರಿ. ಲಾಟರಿ ಹಣ ಪಡೆಯಲು ಮುಂಗಡ ಪಾವತಿಸಬೇಕು ಎಂದು ಹೇಳಿದ್ದರು. ಇದನ್ನು ನಂಬಿದ ವಾಸೀಂ, ಅಪರಿಚಿತರು ಸೂಚಿಸಿದ ಖಾತೆಗೆ ಹಂತಹಂತವಾಗಿ 29 ಸಾವಿರ ರೂ. ಜಮೆ ಮಾಡಿದ್ದರು. ಆದರೆ, ಇದಾದ ಬಳಿಕ ಅಪರಿಚಿತರು ವಾಸೀಂ ಸಂಪರ್ಕಕ್ಕೆ ಸಿಕ್ಕಿಲ್ಲ.
ಖಾತೆಯಿಂದ ಹಣ ಕಡಿತ: ಫ್ರೇಜರ್ಟೌನ್ ನಿವಾಸಿ ಕಿರಣ್ಕುಮಾರ್ (39) ಮುತ್ತೂಟ್ ಫೈನಾನ್ಸ್ನಲ್ಲಿ
ಚಿನ್ನ ಒತ್ತೆಯಿಟ್ಟು ಸಾಲ ಪಡೆದಿದ್ದರು. ಏ.20ರಂದು ಕಚೇರಿಗೆ ಹೋಗಿ ಸಾಲ ತೀರಿಸುವುದಾಗಿ ಹೇಳಿದ್ದರು. ಆನ್ಲೈನ್ ಮೂಲಕ ಅರ್ಧ ಹಣ ಪಾವತಿಸಿದ್ದರು. ಉಳಿದ ಹಣಕ್ಕಾಗಿ ಬ್ಯಾಂಕ್ಗೆ ಹೋಗಿ 50 ಸಾವಿರ ರೂ. ಡ್ರಾ ಮಾಡಿದ್ದರು. ಇದಾದ ಕೆಲ ಕ್ಷಣದಲ್ಲೇ ಕಿರಣ್ ಖಾತೆಯಿಂದ 69,777 ರೂ. ಕಡಿತವಾಗಿದೆ.