ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ಪಂಕ್ಚರ್​ ಹಾಕುತ್ತಿದ್ದವರ ಮೇಲೆ ಲಾರಿ ಹರಿದು ಮೂವರು ಸಾವು

Accident
Published on

ಬೀದರ್: ಲಾರಿ ಹರಿದು ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬೀದರ್ ತಾಲೂಕಿನ ರಾಷ್ಟೀಯ ಹೆದ್ದಾರಿ 09ರ ಮಿನಕೇರಾ ಕ್ರಾಸ್ ಬಳಿ ಬುಧವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ನಡೆದಿದೆ.

ಮೃತ ದುರ್ದೈವಿಗಳನ್ನು ಅನ್ಸರ್ ಬಸಂತಪೂರ್, ವಿಜಯ ಕುಮಾರ್ ಬಸಂತಪೂರ್ ಮತ್ತು ಇಸ್ಮೈಲ್​ ಎಂದು ಗುರುತಿಸಲಾಗಿದೆ.

ಗೂಡ್ಸ್ ಕ್ಯಾರಿಯರ್​ ವಾಹನದಲ್ಲಿ ಈರುಳ್ಳಿ ತುಂಬಿಕೊಂಡು ಹೈದರಾಬಾದ್​ಗೆ ಹೊರಟ್ಟಿದ್ದರು. ವಾಹನ ಪಂಕ್ಚರ್ ಆಗಿದ್ದಕ್ಕೆ ಮಿನಕೇರಾ ಕ್ರಾಸ್ ಬಳಿಯ ಫ್ಲೈಓವರ್ ಮೇಲೆ ವಾಹನ ನಿಲ್ಲಿಸಿ ಪಂಕ್ಚರ್ ಜೋಡನೆ ಮಾಡುತ್ತಿದ್ದರು. ಈ ವೇಳೆ ಲಾರಿ ಹರಿದು ದುರ್ಘಟನೆ ಸಂಭವಿಸಿದೆ.

ಸ್ಥಳಕ್ಕೆ ಬೀದರ್ ಗ್ರಾಮೀಣ ಪೊಲೀಸ ಠಾಣೆಯ ಸಿಪಿಐ ಸಾವಳಗಿ ಹಾಗೂ ಬಗದಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net