ವಿವಿಧ ಕಲಾತಂಡಗಳ ಮೆರವಣಿಗೆ

kdr mahavera
ಕಡೂರಿನಲ್ಲಿ ಜೈನ್ ಸಮಾಜದ ಮುಖಂಡರು ಮೆರವಣಿಗೆ ನಡೆಸಿದರು. ಅಮೃತ್‌ಲಾಲ್ ಮೆಹತಾ, ಮಹಾವೀರ್ ಸುರಾನಾ, ಸಂಪತ್‌ಲಾಲ್ ಜೈನ್, ವಿಮಲ್ ಜೈನ್ ಇತರರಿದ್ದರು.
Published on

ಕಡೂರು: ಭಗವಾನ್ ಮಹಾವೀರರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಸಕಲಜೈನ್ ಸಮಾಜದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಂಕೃತ ವಾಹನದಲ್ಲಿ ಮಹಾವೀರರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳಿಂದ ಮೆರವಣಿಗೆ ನಡೆಸಲಾಯಿತು. ಬಳಿಕ ಬಾಣಾವರ ಸಮೀಪದ ಭಗವಾನ್ ಮಹಾವೀರ್ ಗೋಶಾಲೆಯಲ್ಲಿ ಜಾನುವಾರುಗಳಿಗೆ ಮೇವು ಮತ್ತು ಹಣ್ಣುಗಳನ್ನು ನೀಡಲಾಯಿತು. ಮೆರವಣಿಗೆಯಲ್ಲಿ ಜೈನ್ ಸಮಾಜದಿಂದ ಬ್ಯಾನರ್‌ಗಳನ್ನು ಅಳವಡಿಸಿ ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸುವ ಸಂದೇಶಗಳು ಗಮನಸೆಳೆಯಿತು.
ಜೈನ್ ಸಮಾಜದ ಮುಖಂಡರಾದ ಅಮೃತಲಾಲ್ ಮೆಹತಾ, ಲಾಲ್ ಚಂದ್ ಡಾಗಾ, ಮಹಾವೀರ್ ಸುರಾನಾ, ಸಂಪತ್‌ಲಾಲ್ ಜೈನ್, ವಿಮಲ್ ಜೈನ್, ತರುಣ್ ಜೈನ್, ಮದನ್ ಲಾಲ್, ಪೂಲ್ ಚಂದ್, ವಿನೋದ್ ಜೈನ್, ಮಂಜು ಜೈನ್, ವಿನಯ್ ಜೈನ್, ಉತ್ತಮ್ ಜೈನ್, ಶಿವರತನ್ ಸಂಚೇತಿ, ವಿನಯ್ ದಂಡಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net