

ಬೆಂಗಳೂರು: ವಿದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕ, ಲಗೇಜ್ ಬ್ಯಾಗ್‌ನಲ್ಲಿ ಚಿನ್ನದ ನಟ್ ಬೋಲ್ಟ್ ಸೋಗಿನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
18ರಂದು ದುಬೈಯಿಂದ ಎಮಿರೇಟ್ಸ್ ವಿಮಾನದಲ್ಲಿ ಕೆಐಎಗೆ ಬಂದಿಳಿದ ಪ್ರಯಾಣಿಕರ ಲಗೇಟ್ ಬ್ಯಾಗ್‌ಗಳನ್ನು ಸ್ಕಾೃನ್ ಮಾಡಲಾಗುತ್ತಿತ್ತು. ಇದರಲ್ಲಿ ಓರ್ವನ ಬ್ಯಾಗ್‌ನಲ್ಲಿ ನಟ್ ಮತ್ತು ಬೋಲ್ಟ್ ಅನುಮಾನಾಸ್ಪದವಾಗಿ ಕಂಡುಬಂದು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಅದು ಚಿನ್ನದ್ದಾಗಿದ್ದು, ಪ್ರಯಾಣಿಕನ ಕಳ್ಳಾಟ ಬಯಲಾಗಿದೆ. ಪ್ರತಿಯೊಂದು ನಟ್ ಮತ್ತು ಬೋಲ್ಟ್ ತೆಗೆದು ನೋಡಿದಾಗ 267 ಗ್ರಾಂ ಚಿನ್ನ ಪತ್ತೆಯಾಗಿದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.