'ಸರಿಪೋಧಾ ಶನಿವಾರಂ' ಚಿತ್ರಕ್ಕೆ ನ್ಯಾಚುರಲ್​ ಸ್ಟಾರ್​ ಪಡೆದ ಸಂಭಾವನೆ ಕೇಳಿದ್ರೆ ದಂಗಾಗ್ತೀರಾ!

Untitled design (90)
Published on

ಆಂಧ್ರಪ್ರದೇಶ: ಕಳೆದ ವರ್ಷ ಫ್ಯಾಮಿಲಿ ಎಂಟರ್​ಟೈನರ್​ 'ಹಾಯ್ ನನ್ನಾ' ಚಿತ್ರದ ಮೂಲಕ ಅಪಾರ ಸಿನಿಪ್ರೇಕ್ಷಕರ ಮನಗೆದ್ದ ಟಾಲಿವುಡ್​ ನ್ಯಾಚುರಲ್ ಸ್ಟಾರ್​ ನಟ ನಾನಿ ಇದೀಗ ತಮ್ಮ ಮುಂಬರುವ ಸಿನಿಮಾಗಳ ಕೆಲಸದಲ್ಲಿ ಸದ್ಯ ಸಖತ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಾನಿ ನಟಿಸುತ್ತಿರುವ ಹೊಸ ಪ್ರಾಜೆಕ್ಟ್​ಗಳ ಬಗ್ಗೆ ಹೆಚ್ಚು ಕುತೂಹಲ ತೋರುತ್ತಿರುವ ಅಭಿಮಾನಿಗಳು, ನಟನ ಹೊಸ ಚಿತ್ರದ ಅಪ್ಡೇಟ್​ಗಾಗಿ ನಿರೀಕ್ಷಿಸುತ್ತಿದ್ದಾರೆ.

ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದ ಹಾಯ್​ ನನ್ನಾ ನಂತರ ಇದೀಗ ತಮ್ಮ ಸಂಭಾವನೆ ಮೊತ್ತವನ್ನು ದುಬಾರಿ ಮಾಡಿಕೊಂಡಿರುವ ನಾನಿ, ವಿವೇಕ್ ಆತ್ರೇಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ ಸರಿಪೋಧಾ ಸನಿವಾರಂ ಚಿತ್ರೀಕರಣದಲ್ಲಿ ತೊಡಗಿದ್ದು, ಈ ಚಿತ್ರಕ್ಕಾಗಿ ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಕೇವಲ ಇದೊಂದು ಚಿತ್ರಕ್ಕೆ ಬರೋಬ್ಬರಿ 25 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಟಾಲಿವುಡ್​ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ.

ಇದು ಅವರ ವೃತ್ತಿಜೀವನದಲ್ಲಿ ಪಡೆದ ಭಾರೀ ಮೊತ್ತದ ಪೇಮೆಂಟ್​ ಎಂದು ಹೇಳಲಾಗಿದ್ದು, ನಾನಿ ನಟನೆಯ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಕಮಾಲ್ ಮಾಡುವ ಮೂಲಕ ಬ್ಲಾಕ್​ಬಸ್ಟರ್​ ಚಿತ್ರವಾಗಿ ಹೊರಹೊಮ್ಮುತ್ತಿದೆ. ಈ ಹಿನ್ನೆಲೆ ಚಿತ್ರ ನಿರ್ಮಾಪಕರು ಕೂಡ ನಟನಿಗೆ ಹೆಚ್ಚಿನ ಸಂಭಾವನೆ ಕೊಡಲು ಹೆಚ್ಚು ಯೋಚಿಸುತ್ತಿಲ್ಲ ಎಂಬುದು ವರದಿ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net