'ಕಲ್ಕಿ 2898 ಎಡಿ' ಚಿತ್ರಕ್ಕೆ ಪ್ರಭಾಸ್​ ಪಡೆದ ಸಂಭಾವನೆ ಕೇಳಿದ್ರೆ ಹುಬ್ಬೇರಿಸ್ತೀರಾ! ಈ ಸಾಲಿನಲ್ಲಿರುವುದು ಇಬ್ಬರೇ ನಟರು…

WhatsApp Image 2024-04-25 at 11.52.35 AM
Published on

ಬೆಂಗಳೂರು: ಟಾಲಿವುಡ್​ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಸೈನ್ಸ್​-ಫಿಕ್ಷನ್ ಆಧಾರಿತ ಕಲ್ಕಿ 2898 ಎಡಿ ಚಿತ್ರವು ಇದೀಗ ಎಲ್ಲರ ಗಮನಸೆಳೆಯುವಲ್ಲಿ ಮುಂಚೂಣಿಯಲ್ಲಿದ್ದು, ಡಾರ್ಲಿಂಗ್ ಪ್ರಭಾಸ್​ ಲುಕ್ ಹಾಗೂ ಅವರ ಅಭಿನಯವನ್ನು ಕಣ್ತುಂಬಿಕೊಳ್ಳಲು ಸಿನಿಪ್ರೇಕ್ಷಕರು, ಅಭಿಮಾನಿಗಳು ಕಾತರ ವ್ಯಕ್ತಪಡಿಸಿದ್ದಾರೆ. ದಿನದಿಂದ ದಿನಕ್ಕೆ ಸಿನಿಮಾದ ಬಗ್ಗೆ ಬೆರಗಾಗುವಂತ ಸುದ್ದಿಗಳು ಹರಿದಾಡುತ್ತಿದ್ದು, ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಪಡೆದ ಸಂಭಾವನೆ ಮೊತ್ತ ಕೇಳುಗರ ಹುಬ್ಬೇರುವಂತೆ ಮಾಡಿದೆ.

ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ಸ್ಟಾರ್​​ ನಟರು ಪಡೆದ ಸಂಭಾವನೆ ಮೊತ್ತ ಮಾತ್ರ ಚಿತ್ರರಂಗದವರನ್ನು ಭಾರೀ ಅಚ್ಚರಿಗೆ ದೂಡಿದೆ. ರಿಲೀಸ್​ಗೆ ಸಜ್ಜಾಗಿರುವ ಪ್ರಭಾಸ್​ ಸಿನಿಮಾಗೆ ಎಲ್ಲಿಲ್ಲದ ನಿರೀಕ್ಷೆ ಹಾಗೂ ಭರವಸೆ ವ್ಯಕ್ತವಾಗಿದ್ದು, ಈ ಚಿತ್ರದ ಮೂಲಕ ನಿರ್ದೇಶಕರು ಹೇಳಲು ಹೊರಟಿರುವುದೇನು? ಯಾವ ಕಥೆಯನ್ನು ಪರಿಚಯಿಸಲಿದ್ದಾರೆ ಎಂಬ ಕುತೂಹಲ ಸದ್ಯ ಪ್ರೇಕ್ಷಕರಲ್ಲಿ ಕಾಡುತ್ತಿದೆ.

600 ಕೋಟಿ ರೂ. ಬಜೆಟ್​ನಲ್ಲಿ ರೂಪಿಸಲಾದ ಕಲ್ಕಿ 2898 ಎಡಿ ಚಿತ್ರದಲ್ಲಿ ಬಾಲಿವುಡ್​ನ ಸ್ಟಾರ್​ಗಳಾದ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಪ್ರಭಾಸ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಪ್ರಭಾಸ್ ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಪಡೆದಿದ್ದು, ಅಮಿತಾಬ್​ 18 ಕೋಟಿ ರೂ. ಸ್ವೀಕರಿಸಿದ್ದಾರೆ ಎಂದು ಸಿನಿ ಮೂಲಗಳು ಮಾಹಿತಿ ಹಂಚಿಕೊಂಡಿವೆ. ಸದ್ಯ ಭಾರತೀಯ ಚಿತ್ರರಂಗದಲ್ಲಿ 150 ಕೋಟಿ ರೂ. ಪೇಮೆಂಟ್ ಪಡೆದವರಲ್ಲಿ ಯಶ್ ಹಾಗೂ ಪ್ರಭಾಸ್​ ಮುಂಚೂಣಿಯಲ್ಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net