ಸ್ಮೋಕಿಂಗ್ ಚಟ ಹೆಚ್ಚಾಗಲು ಏಕಾಂಗಿತನ ಕಾರಣವಂತೆ...

Smoking
Published on

ಲಂಡನ್: ದೀರ್ಘ ಕಾಲದಿಂದ ಏಕಾಂಗಿಯಾಗಿ ಇರುವವರಿಗೂ, ಧೂಮಪಾನಕ್ಕೂ ಹತ್ತಿರದ ನಂಟಿದೆ ಎಂದು ಸಂಶೋಧನಾ ಸಂಸ್ಥೆಯೊಂದರ ಅಧ್ಯಯನದಿಂದ ದೃಢಪಟ್ಟಿದೆ. ಸಾವಿರಾರು ಜನರ ಸಮೀಕ್ಷೆ ನಡೆಸಿದ ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರು ನಿಯತಕಾಲಿಕವೊಂದರಲ್ಲಿ ಈ ಕುರಿತು ವರದಿ ಪ್ರಕಟಿಸಿದ್ದಾರೆ.

ಏಕಾಂಗಿತನದ ಸಮಸ್ಯೆಯಿಂದ ಹೊರಬರಲು ಕೆಲವರು ಸ್ಮೋಕಿಂಗ್ ಶುರು ಮಾಡಿದರೆ, ಈಗಾಗಲೇ ಸ್ಮೋಕಿಂಗ್ ಮಾಡುವ ಅಭ್ಯಾಸ ಇರುವವರು ಏಕಾಂಗಿತನದಿಂದಾಗಿ ಧೂಮಪಾನದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಏಕಾಂಗಿಯಾಗಿರುವವರು ಧೂಮಪಾನದ ಚಟದಿಂದ ಹೊರಬರುವ ಸಾಧ್ಯತೆಯೂ ಕಡಿಮೆ ಎಂದು ಸಮೀಕ್ಷಾ ತಂಡದಲ್ಲಿದ್ದ ಡಾ. ರಾಬಿನ್ ವೂಟನ್ ಹೇಳಿದ್ದಾರೆ.ಇದನ್ನೂ ಓದಿ: ‘ಸುಂದರ ತ್ವಚೆಗಾಗಿ ಇದನ್ನು ಬಳಸಿ’ ಎಂದು ಇನ್ಮುಂದೆ ಹೇಳಲ್ಲ ಎಂದ ಜಾನ್ಸ್​ನ್​ ಆ್ಯಂಡ್ ಜಾನ್ಸನ್​

ಕರೊನಾ ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ ಮೂಲಕ ನಡೆದ ಈ ಸಮೀಕ್ಷೆಯಲ್ಲಿ, ಬ್ರಿಟನ್ನಿನ 22 ಲಕ್ಷ ಜನ ತಾವು ಮೊದಲು ಸೇದುತ್ತಿದ್ದುದಕ್ಕಿಂತ ಹೆಚ್ಚು ಸಿಗರೇಟ್ ಸೇದುತ್ತಿರುವುದಾಗಿ ಹೇಳಿದ್ದಾರೆ. ಆಲ್ಕೋಹಾಲ್ ಅಡಿಕ್ಷನ್‌ಗೂ ಏಕಾಂಗಿತನಕ್ಕೂ ಇರುವ ಸಂಬಂಧದ ಬಗ್ಗೆಯೂ ಇದೇ ತಂಡ ಸಮೀಕ್ಷೆ ನಡೆಸಿದೆ. ಆದರೆ ಅವೆರಡರಲ್ಲೂ ಯಾವುದೇ ಸಂಬಂಧ ಇಲ್ಲವೆಂದು ದೃಢಪಟ್ಟಿದೆ. ಇದನ್ನೂ ಓದಿ: ಇಂದಿನ ಸಿಎಂ ಸಭೆಯಲ್ಲಿ ಡಾ.ಸುಧಾಕರ್ ಪಾಲ್ಗೊಳ್ಳದಿರಲು ಇದೆ ಬಲವಾದ ಕಾರಣ; ಸಚಿವರಿಗೆ ಆತಂಕ

‘‘ಸ್ಮೋಕಿಂಗ್‌ನಿಂದ ಮಾನಸಿಕ ಆರೋಗ್ಯದ ಮೇಲೂ ಪರಿಣಾಮವಾಗುತ್ತದೆ. ಸಿಗರೇಟ್‌ನಲ್ಲಿರುವ ನಿಕೋಟಿನ್ ಮನುಷ್ಯರ ಮಿದುಳಿನಲ್ಲಿರುವ ಡೋಪಮೈನ್‌ನಂತಹ ನರವಾಹಕಗಳ ಮೇಲೆ ದುಷ್ಪರಿಣಾಮ ಉಂಟು ಮಾಡುವುದೇ ಮಾನಸಿಕ ಆರೋಗ್ಯ ಹದಗೆಡಲು ಕಾರಣ’’ ಎನ್ನುತ್ತಾರೆ ಸಮೀಕ್ಷಾ ತಂಡದ ಇನ್ನೊಬ್ಬ ಸದಸ್ಯ ಡಾ. ಜೋರಿಯೆನ್ ಟ್ರೂವರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net